ಮನೋರಂಜನೆ

ಬಾಲಕನಿಂದ ಬಾಲಿವುಡ್ ನಟಿ ಸುಷ್ಮಿತಾ ಸೇನ್‌ಗೆ ಲೈಂಗಿಕ ಕಿರುಕುಳ

Pinterest LinkedIn Tumblr


ಬಾಲಿವುಡ್‌ ನಟಿ ಹಾಗೂ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌, ಇತ್ತೀಚೆಗೆ ತಾವು 15 ವರ್ಷದ ಬಾಲಕನೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

ನವದೆಹಲಿ: ಬಾಲಿವುಡ್‌ ನಟಿ ಹಾಗೂ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌, ಇತ್ತೀಚೆಗೆ ತಾವು 15 ವರ್ಷದ ಬಾಲಕನೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

ಮಹಿಳಾ ಸುರಕ್ಷತೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಷ್ಮಿತಾ ಸೇನ್‌, ‘ಆರು ತಿಂಗಳ ಹಿಂದೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಂಡಿದ್ದೆ. ಆಗ 15 ವರ್ಷದ ಬಾಲಕನೊಬ್ಬ ಎಲ್ಲರ ಎದುರಿನಲ್ಲೇ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡ.

ನಾನು ಆತನ ಕೈಗಳನ್ನು ಹಿಡಿದು, ಆತನನ್ನು ತಡೆದೆ. ಆತ ನಾನೇನೂ ಮಾಡಿಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಬಳಿಕ ಕೊರಳಪಟ್ಟಿಹಿಡಿದು ಹೊರಗೆ ಕರೆದುಕೊಂಡು ಹೋಗಿ, ನಿನ್ನ ಕೃತ್ಯದ ಬಗ್ಗೆ ನಾನು ಇಲ್ಲಿ ಗದ್ದಲ ಎಬ್ಬಿಸಿದರೆ, ನಿನ್ನ ಕಥೆ ಅಷ್ಟೇ, ಮುಗಿದೇ ಹೋಗುತ್ತದೆ ಎಂದು ಬೆದರಿಸಿದೆ. ಬಳಿಕ ಆತ ತನ್ನ ತಪ್ಪು ಒಪ್ಪಿಕೊಂಡ. ಮುಂದೆ ಹೀಗೆ ಮಾಡುವುದಿಲ್ಲ ಎಂದು ಮಾತುಕೊಟ್ಟ’ ಎಂದು ಸುಷ್ಮಿತಾ ಸೇನ್‌ ಹೇಳಿದ್ದಾರೆ.

Comments are closed.