ಮನೋರಂಜನೆ

ಬಿಗ್ ಬಾಸ್ ಖ್ಯಾತಿಯ ಅಯ್ಯಪ್ಪ ನಿಶ್ಚಿತಾರ್ಥ ! ನಟಿ ಯಾರು ಗೊತ್ತೇ..?

Pinterest LinkedIn Tumblr

ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಎನ್ ಸಿ ಅಯ್ಯಪ್ಪ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ಅನು ಪೂವಮ್ಮ ಅವರ ಜತೆಗೆ ಉಂಗುರ ಬದಲಾಯಿಸಿಕೊಂಡಿದ್ದು, ಇವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನಲ್ಲಿ ತುಂಬಾ ಸರಳವಾಗಿ ನಡೆಯಿತು.

ಕೇವಲ ಬೆರಳೆಣಿಕೆಯಷ್ಟು ಗೆಳೆಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಅಯ್ಯಪ್ಪ ನಿಶ್ಚಿತಾರ್ಥ ನಡೆದಿದೆ. ಇವರ ಮದುವೆ ಮುಂದಿನ ವರ್ಷ ನಡೆಯಲಿದೆ. ಬಿಗ್ ಬಾಸ್ ಸೀಸನ್ 3ರಲ್ಲಿ ಅಯ್ಯಪ್ಪ ಸ್ಪರ್ಧಿಸಿದ್ದರು. ನಟಿ ಪ್ರೇಮಾ ಸಹೋದರ ಇವರು.

ಇನ್ನು ನಟಿ ಅನು ಪೂವಮ್ಮ ಬಗ್ಗೆ ಹೇಳಬೇಕೆಂದರೆ, ಇವರು ಕರ್ವಾ, ಲೈಫ್ ಸೂಪರ್, ಕಥಾ ವಿಚಿತ್ರ ಮತ್ತು ಪಾನಿಪೂರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಕಿರುತೆರೆಗೂ ಅಡಿಯಿಟ್ಟ ಇವರು ’ಮುದ್ದು ಲಕ್ಷ್ಮಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ಐಶ್ವರ್ಯಾ ಎಂಬ ನೆಗಟೀವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಮಿಸ್ ಇಂಡಿಯಾ ಆಗಬೇಕು ಎಂದು ಕನಸು ಕಾಣುವ ಪಾತ್ರ ಅವರದು. ಧ್ರುವಂತ್ ಅವರನ್ನು ಮದುವೆಯಾಗಲೇಬೇಕು ಎಂದು ಪಟ್ಟುಹಿಡಿಯುವ ಪಾತ್ರ ಇವರದು.

Comments are closed.