ಮನೋರಂಜನೆ

ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಹಿಂದಿಕಿರುತೆರೆ ನಟಿ ಆಕಾಂಕ್ಷಾ ಸಿಂಗ್ !

Pinterest LinkedIn Tumblr

ಬೆಂಗಳೂರು: ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಹಿಂದಿಕಿರುತೆರೆ ನಟಿ ಆಕಾಂಕ್ಷಾ ಸಿಂಗ್ ಆಯ್ಕೆಯಾಗಿದ್ದಾರೆ.

ಮೇ 17 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಕಬೀರ್ ದುಹಾನ್ ಸಿಂಗ್ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಸುದೀಪ್ ಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಕೃಷ್ಣ ಉತ್ತರಿಸಿದ್ದಾರೆ. ಮುಂಬಯಿ ಮೂಲದ ಆಕಾಂಕ್ಷಾ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡಲಿದ್ದಾರೆ.

ಸಿನಿಮಾದಲ್ಲಿ ಆಕಾಂಕ್ಷಾ ಎರಡು ಶೇಡ್ ಗಳಲ್ಲಿ ಪಾತ್ರ ಹೊಂದಿದ್ದಾರೆ. ಆಕಾಂಕ್ಷಾಗೆ ದಕ್ಷಿಣ ಭಾರತ ನಾಯಕಿಯರ ಲುಕ್ ಇರುವುದರಿಂದ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ, ಮುಂದಿನ ವಾರ ಆಕಾಂಕ್ಷಾ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬಾಲಿವುಡ್ ನ ಬದರಿನಾಥ್ ಕಿ ದುಲ್ಹನಿಯಾ ಹಾಗೂ ಟಾಲಿವುಡ್ ನ ಮಲ್ಲಿರಾವಣ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಾಗಾರ್ಜುನ ರಶ್ಮಿಕಾ ಮಂದಣ್ಣ ಅಭಿನಯದ ನಾನಿ ಸಿನಿಮಾಗೂ ಆಕಾಂಕ್ಷಾ ಸಹಿ ಮಾಡಿದ್ದಾರೆ.ಬೆಂಗಳೂರು, ಚೆನ್ನೈ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Comments are closed.