ಮನೋರಂಜನೆ

ನಟ ಕಿಚ್ಚ ಸುದೀಪ್ ಇನ್ನು ಯಾವುದೇ ಪ್ರಚಾರದಲ್ಲಿ ಭಾಗವಹಿಸಲ್ಲಎಂದು ಹೇಳಿದ್ದು ಯಾಕೆ…?

Pinterest LinkedIn Tumblr

ನಟ ಸುದೀಪ್ ಅವರು ಕೆಲವು ರಾಜಕಾರಣಿಗಳ ಪರ ಪ್ರಚಾರ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಕೆಲವರು ವಿರೋಧಿಸಿದರು. ಸುದೀಪ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ಸುದೀಪ್ ಟ್ವಿಟರ್‌ನಲ್ಲಿ ’ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ’ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಸುದೀಪ್ ಈ ರೀತಿ ಬರೆದುಕೊಂಡಿದ್ದಾರೆ, “ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ,, ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು,, ಸಣ್ಣದು ಅಥವ ದೊಡ್ಡದು ಎಂಬುದು ವಿಷಯವಲ್ಲ,, ಅವರು ಅಂದು ನಿಂತದ್ದು ವಿಷಯ.. ಈಗ ಅವರಿಗಾಗಿ ನಾನು ಅಲ್ಲಿರುವುದು ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ,, ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು…ಅದರಲ್ಲಿ ಯಾವುದೇ ವಿಷಾದವಿಲ್ಲ‌

ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ,,ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗು ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.. ನಾನು ಒಬ್ಬ ಕಲಾವಿದ ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗು ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ..

ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,ಆದರೂ,,ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ…ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ…”

Comments are closed.