
ಮುಂಬೈ: ಬಾಲಿವುಡ್ ಮತ್ತೊಂದು ವಿವಾಹ ವೈಭವಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ನಟಿ ಸೋನಂ ಕಪೂರ್ ನಾಳೆ (ಮೇ 8) ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜ ಅವರನ್ನು ವರಿಸಲಿದ್ದಾರೆ. ಸೋನಂ ಅವರ ಮೆಹಂದಿ ಫೋಟೊ ಮತ್ತು ವಿಡಿಯೊ ಕ್ಲಿಪ್ಪಿಂಗ್‌ಗಳು ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡಿದವು.

ಶಿಲ್ಪಾಶೆಟ್ಟಿ, ಆಸಿನ್ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ಮದುವೆ ಮೆಹಂದಿ ಹಾಕಿದ ಕಲಾವಿದೆ ವೀಣಾನಾಗ್ಡಾ ಸೋನಂ ಅವರಿಗೂ ಮೆಹಂದಿ ಹಾಕಿದ್ದಾರೆ.

ಮುಂಗೈ, ಪಾದದ ಮೇಲೆ ಮೆಹಂದಿ ಚಿತ್ತಾರ ಬಿಡಿಸಿಕೊಂಡಿರುವ ಸೋನಂ, ಭಾವಿ ಪತಿ ಆನಂದ್ ಜೊತೆಗೆ ನಗುನಗುತ್ತಾ ಇರುವ ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ರಿಯಾ ಕಪೂರ್, ಜಾಹ್ನವಿ ಕಪೂರ್, ಖುಷಿ ಕಪೂರ್, ಅರ್ಜುನ್ ಕಪೂರ್, ಶಾನಯಾ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಕರಣ್ ಜೋಹರ್, ಕುನಾಲ್ ರಾವಲ್, ಮಸಬಾ ಗುಪ್ತ, ಅಬು ಜಾನಿ ಸೇರಿದಂತೆ ಕಪೂರ್ ಕುಟುಂಬ ಗೆಳೆಯರ ಬಳಗ ಮೆಹಂದಿ ಸಂಭ್ರಮಕ್ಕೆ ಸಾಕ್ಷಿಯಾಯಿತು.
Comments are closed.