ಮನೋರಂಜನೆ

‘ಮೆಜೆಸ್ಟಿಕ್‌’ ನಿರ್ದೇಶಕ ಪಿ.ಎನ್‌.ಸತ್ಯ ನಿಧನ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪಿ.ಎನ್‌.ಸತ್ಯ (46) ಶನಿವಾರ ನಿಧನರಾದರು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಗುರುವಾರಷ್ಟೇ ಮನೆಗೆ ಕರೆದುಕೊಂಡು ಬರಲಾಗಿತ್ತು.

ಬಸವೇಶ್ವರ ನಗರದ ಸಹೋದರಿ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರೌಡಿಸಂ ಕಥೆಯನ್ನು ಒಳಗೊಂಡ ಚಿತ್ರಗಳ ನಿರ್ದೇಶನದ ಮೂಲಕ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಶಶಿಕುಮಾರ್‌ ನಟನೆಯ ‘ಸುಂದರ ಪುರುಷ’ ಅವರು ನಿರ್ದೇಶಿಸಿದ ಮೊದಲ ಚಿತ್ರ. ದರ್ಶನ್‌ ನಾಯಕನಾಗಿ ಅಭಿನಯಿಸಿದ ‘ಮೆಜೆಸ್ಟಿಕ್‌’ ಚಿತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು. ಸುದೀಪ್‌ ಅಭಿನಯದ ‘ಗೂಳಿ’, ದುನಿಯಾ ವಿಜಯ್‌ ಅಭಿನಯದ ‘ಶಿವಾಜಿನಗರ’ ಸೇರಿ ಅನೇಕ ಸಿನಿಮಾಗಳನ್ನು ಸತ್ಯ ನಿರ್ದೇಶಿಸಿದ್ದಾರೆ.

‘ಪಾಗಲ್‌’ ಚಿತ್ರದಲ್ಲಿ ನಾಯಕನಾಗಿಯೂ ಅವರು ಕಾಣಿಸಿಕೊಂಡಿದ್ದರು. ಹತ್ತಾರು ಸಿನಿಮಾಗಳಲ್ಲಿ ಖಳನಟನ ಪಾತ್ರದಲ್ಲಿಯೂ ಅಭಿನಯಿಸಿದ್ದರು. ‘ಮರಿ ಟೈಗರ್‌’ ಸತ್ಯ ನಿರ್ದೇಶನದ ಕೊನೆಯ ಸಿನಿಮಾ.

Comments are closed.