ಮನೋರಂಜನೆ

ಮಲೇಷ್ಯಾದಲ್ಲಿ ನಟಿ ವೇದಿಕಾ ಹಾವಿನ ಜತೆ ಸರಸ

Pinterest LinkedIn Tumblr


ಕನ್ನಡದ ’ಸಂಗಮ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಅಡಿಯಿಟ್ಟ ಬೆಡಗಿ ವೇದಿಕಾ. ಅದಾದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಗೆ ’ಶಿವಲಿಂಗ’ದಲ್ಲಿ ಮಿಂಚಿದರು. ಕಳೆದ ವರ್ಷ ತೆರೆಕಂಡ ’ಗೌಡ್ರು ಹೋಟೆಲ್’ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಗುರಿ ಮುಟ್ಟಲಿಲ್ಲ.

ಇದೀಗ ’ಹೊಮ್ ಮಿನಿಸ್ಟರ್’ ಚಿತ್ರದಲ್ಲಿ ವೇದಿಕಾ ಅಭಿನಯಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಹೀರೋ. ಈ ಚಿತ್ರದ ಚಿತ್ರೀಕರಣ ಮಲೇಷ್ಯಾದಲ್ಲಿ ಭರದಿಂದ ಸಾಗುತ್ತಿದೆ. ಕನ್ನಡ ಮತ್ತು ತೆಲುಗಿನ ದ್ವಿಭಾಷಾ ಚಿತ್ರವಿದು. ಈ ಚಿತ್ರದ ಹಾಡೊಂದರ ಚಿತ್ರೀಕರಣ ಮಲೇಷ್ಯಾದಲ್ಲಿ ಸೆರೆಹಿಡಿಯಲಾಗುತ್ತಿದ್ದು, ಮಲೇಷ್ಯಾದಲ್ಲಿ ಪೈಥಾನ್ ಹಾವನ್ನು ಕೊರಳಿಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ ವೇದಿಕಾ.

ಪೈಥಾನ್ ಜತೆಗಿನ ಸರಸವಾಡುವ ವೀಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಪೈಥಾನ್‌ಗಳು ಫ್ರೆಂಡ್ಲಿ ಆದರೆ ವೈಪರ್ಸ್ ಡೆಡ್ಲಿ, ಹುಷಾರಾಗಿರಿ ಎಂದು ಕೆಲವರು ಎಚ್ಚರಿಸಿದ್ದಾರೆ. ನಿಮ್ಮ ಧೈರ್ಯ ಮೆಚ್ಚಬೇಕಾದದ್ದೇ ಎಂದು ಕೆಲವರು, ಇದು ನಿಜವಾದ ಹಾವೇ ಎಂದು ಕಾಮೆಂಟ್ ಮಾಡಿದ್ದಾರೆ.

ಚಿತ್ರೀಕರಣಕ್ಕಾಗಿ ದಟ್ಟ ಕಾಡಿನ ನಡುವೆ ಅಲೆದಾಡುವಾಗ ಜಿಗಣೆಗಳಿಂದಲೂ ಕಚ್ಚಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನೂ ಟ್ವಿಟರ್‌ನಲ್ಲಿ ವೇದಿಕಾ ಹಂಚಿಕೊಂಡಿದ್ದಾರೆ. ಅಂದಹಾಗೆ ಹೋಮ್ ಮಿನಿಸ್ಟರ್ ಚಿತ್ರಕ್ಕೆ ಶ್ರೀಹರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

Comments are closed.