ಮನೋರಂಜನೆ

ಎರಡು ಕೈ ಸೇರಿದರೆ ಚಪ್ಪಾಳೆ ಹೇಗೋ ಕಾಸ್ಟಿಂಗ್ ಕೌಚ್ ಹಾಗೆ: ರಾಗಿಣಿ

Pinterest LinkedIn Tumblr


ಬಣ್ಣದ ಜಗತ್ತಿನಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿಚಾರವಾಗಿ ಹಲವಾರು ತಾರೆಗಳು ಮೌನ ಮುರಿದಿದ್ದಾರೆ. ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಸಹ ಮಾತನಾಡಿದ್ದು, ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ವಿಚಾರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ರಾಗಿಣಿ ಅಭಿನಯದ ಲೇಟೆಸ್ಟ್ ಚಿತ್ರ ’ಕಿಚ್ಚು’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ’ನನ್ನ ಪ್ರಕಾರ ಕಾಸ್ಟಿಂಗ್ ಕೌಚ್ ಎಂಬುದು ತೀರಾ ವೈಯಕ್ತಿಕ ವಿಚಾರ. ಯಾಕೆಂದರೆ ಅದು ಅವರವರಿಗೆ ಬಿಟ್ಟದ್ದು. ಆ ರೀತಿಯ ಪರಿಸ್ಥಿತಿ ಎದುರಾದರೆ ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಇದು ಇಬ್ಬರಿಗೂ ಸಂಬಂಧಿಸಿದ್ದು. ಕಾಸ್ಟಿಂಗ್ ಕೌಚ್ ಎಂಬುದು ತುಂಬಾ ಕೆಟ್ಟ ಸಂಸ್ಕೃತಿ’ ಎಂದಿದ್ದಾರೆ.

’ಒಂದು ಕೈ ಸೇರಿದರೆ ಚಪ್ಪಾಳೆ ಆಗಲ್ಲ. ಕಾಸ್ಟಿಂಗ್ ಕೌಚ್ ಕೂಡ ಅದೇ ರೀತಿ. ಇದು ಅವರವರ ವೈಯಕ್ತಿಕ ವಿಚಾರ. ಆದರೆ ಕಾಸ್ಟಿಂಗ್ ಕೌಚನ್ನು ನಾನು ಯಾವೊತ್ತು ಫೇಸ್‍ ಮಾಡಿಲ್ಲ. ನನ್ನ ಕರಿಯರ್, ನನ್ನದೇ ಸ್ಟೈಲಲ್ಲಿ, ಸಿದ್ಧಾಂತಗಳ ಪ್ರಕಾರ ನಡೆಯುತ್ತಿದೆ. ಹಾಗಾಗಿ ಈ ರೀತಿಯ ಪರಿಸ್ಥಿತಿ ನನಗೆ ಎದುರಾಗಿಲ್ಲ ಎಂದಿದ್ದಾರೆ ರಾಗಿಣಿ.

ಕಾಸ್ಟಿಂಗ್ ಕೌಚ್ ಬಗ್ಗೆ ನಡೆಯುತ್ತಿರುವ ಚರ್ಚೆ ನಿಜಕ್ಕೂ ಸ್ವಾಗತಾರ್ಹ. ಈ ಬಗ್ಗೆ ನಾವು ಓಪನ್ ಆಗಿ ಮಾತನಾಡಿದಷ್ಟೂ ನಮ್ಮ ಸುತ್ತಲೂ ಏನಾಗುತ್ತಿದೆ ಎಂದು ಜನಕ್ಕೆ ಗೊತ್ತಾಗುತ್ತದೆ. ಆದರೆ ಇದನ್ನೇ ಸಿಕ್ಕಾಪಟ್ಟೆ ಚರ್ಚಿಸುವುದು ಸರಿಯಲ್ಲ ಎಂದಿದ್ದಾರೆ.

Comments are closed.