ಮನೋರಂಜನೆ

ಮನಮೋಹನ್ ಸಿಂಗ್ ಪಾತ್ರವೇ ನನ್ನ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಪಾತ್ರ: ಅನುಪಮ್ ಖೇರ್

Pinterest LinkedIn Tumblr

ಮುಂಬೈ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ಅಭಿನಯಿಸುವುದು ಅತ್ಯಂತ ಕಠಿಣ ಕೆಲಸ, ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಹೇಳಿದ್ದಾರೆ.

ಮುಂಬೈ ನಲ್ಲಿ ನಡೆದ ಮಾಸ್ಟರ್ ದೀನನಾಥ ಮಂಗೇಷ್ಕರ್ ಸ್ಮೃತಿ ಪ್ರತಿಷ್ಠಾನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾದ್ಯಮದೊಡನೆ ಮಾತನಾಡಿದ ನಟ ’ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಕುರಿತು ವಿವರಿಸಿದ್ದಾರೆ.

“ಚಿತ್ರದ ಚಿತ್ರೀಕರಣವಿನ್ನೂ ನಡೆಯುತ್ತಿದೆ. 40% ಮಾತ್ರ ಮುಗಿದಿದೆ, ನಾನು ನಾಲ್ಕು ತಿಂಗಳ ಕಾಲ ಮನಮೋಹನ್ ಸಿಂಗ್ ಅವರ ಪಾತ್ರವನ್ನು ಅಧ್ಯಯನ ಮಾಡಿದ್ದೇನೆ. ಇದು ಅತ್ಯಂತ ಕಷ್ಟಕರ ಪಾತ್ರ. ಪ್ರೇಕ್ಷರೌ ನನ್ನನ್ನು ಆ ಪಾತ್ರದಲ್ಲಿ ಶೀಘ್ರವಾಗಿಯೇ ಕಾಣಲಿದ್ದಾರೆ ಎನ್ನುವ ನಿರೀಕ್ಷೆ ಇದೆ” ಖೇರ್ ಹೇಳಿದರು.

ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಅನುಪಮ್ ಖೇರ್ ಅವರಿಗೆ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಲಾಗಿದೆ.

“ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್” ಚಿತ್ರೀಕರಣ ಮುಗಿಸಿದ ಅನುಪಮ್ ಖೇರ್ ನೇರವಾಗಿ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದರು. “ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ನಿಜವಾಗಿಯೂ ಸಂತಸ ತಾಳಿದ್ದೇನೆ.” ಅವರು ಹೇಳಿದ್ದಾರೆ.

“ಮಂಗೇಷ್ಕರ್ ಕುಟುಂಬ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಧಾರಣವಾಗಿದೆ. ಅವರು ತಮ್ಮ ಸಂಗೀತದಿಂಡಲೇ ನನ್ನ ಹೃದಯವನ್ನು ಗೆದ್ದಿದ್ದಾರೆ. ತಮ್ಮ ಸಂಗೀತದಿಂದಲೇ ರಾಷ್ಟ್ರವನ್ನು ಒಂದುಗೂಡಿಸಿರುವ ಮಂಗೇಷ್ಕರ್ ಸೋದರಿಯರಿಂದ ಗೌರವ ಸ್ವೀಕರಿಸಲು ನನಗೆ ನಿಜಕ್ಕೂ ಹೆಮ್ಮೆಯಾಗುತ್ತದೆ”

ಅನುಪಮ್ ಖೇರ್ ತಮಗೆ ದೊರೆತ ಪ್ರಶಸ್ತಿಯನ್ನು ಭಾರತದ ಗ್ರಾಮೀಣ ಯುವಕರಿಗೆ ಸಮರ್ಪಿಸಿದ್ದಾರೆ.

“ನನಗೆ ಪ್ರಶಸ್ತಿ ಸಿಕ್ಕಾಗಲೆಲ್ಲಾ ನಾನು ಇನ್ನಷ್ಟು ಕೆಲಸಗಳಲ್ಲಿ ತೊಡಗಬೇಕೆನ್ನುವ ಉತ್ಸಾಹ ಮೂಡುತ್ತದೆ. ನಾನು ನನಗೆ ದೊರೆತ ಪ್ರಶಸ್ತಿ – ಜೀವಮಾನ ಸಾಧನೆಗಾಗಿ ದೊರೆತದ್ದೆಂದು ಹೇಳಿಕೊಳ್ಳಲಾರೆ. ನಾನು ನನ್ನ ವೃತ್ತಿಜೀವನವನ್ನು ಈಗಷ್ಟೇ ಪ್ರಾರಂಭಿಸಿದ್ದೇನೆ ಎಂದೇ ಭಾವಿಸುವೆ. ನಾನು ಈ ಪ್ರಶಸ್ತಿಯನ್ನು ಭಾರತದ ಯುವಜನತೆಗೆ ಅರ್ಪಿಸುತ್ತೇನೆ ಯಾರು ತಮ್ಮ ಹಳ್ಳಿಯಿಂದ ಇಲ್ಲಿಗೆ (ಮುಂಬೈ) ಬಂದು ಜೀವನದಲ್ಲಿನ ಯಶಾಸ್ಸಿಗಾಗಿ ಸತತ ಪ್ರಯತ್ನ ನಡೆಸುತ್ತಾರೆಯೋ ಅವರಿಗೆ ಈ ಪ್ರಶಸ್ತಿ ಸಮರ್ಪಿತ.” ನಟ ಅನುಪಮ್ ಖೇರ್ ತಿಳಿಸಿದರು.

Comments are closed.