ಮನೋರಂಜನೆ

‘ಪಾತ್ರಕ್ಕಾಗಿ ಪಲ್ಲಂಗ’ ಅನುಭವ ನನಗೂ ಆಗಿತ್ತು ಎಂದು ಹೊಸ ಬಾಂಬ್ ಸಿಡಿಸಿದ ನಟಿ ಪೂಣಚ್ಚ

Pinterest LinkedIn Tumblr

ಬೆಂಗಳೂರು: ಈಗ ದೇಶಾದ್ಯಂತ ಬಹು ಚರ್ಚಿತ ವಿಷಯವಾಗಿರುವ ಕಾಸ್ಟಿಂಗ್​ ಕೌಚ್​ ಬಗ್ಗೆ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಅವರು ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ.

‘ಚಿಟ್ಟೆ’ ಸಿನೆಮಾದ ಸಾಂಗ್ ಲಾಂಚ್ ಸಂದರ್ಭ ಈ ಕುರಿತಂತೆ ನಟಿ ತನ್ನ ಅನುಭವವನ್ನು ಬಚ್ಚಿಟ್ಟಿ ದ್ದಾರೆ. ಬಾಲಿವುಡ್ ನಲ್ಲಿ ನನಗೆ ಪಾತ್ರಕ್ಕಾಗಿ ಪಲ್ಲಂಗದ ಅನುಭವವಾಗಿತ್ತು. ಇದೇ ಕಾರಣದಿಂದ ನಾನು ಆ ಎರಡೂ ಸಿನೆಮಾದಲ್ಲಿ ನಟಿಸುವ ಚಾನ್ಸ್ ಕೈಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

ಹರ್ಷಿಕಾ ಬಾಲಿವುಡ್ ಸಿನಿಮಾ ಮಾಡುತ್ತಾರೆ ಅಂತ ಎರಡು ವರ್ಷದ ಹಿಂದೆ ದೊಡ್ಡ ಸುದ್ದಿ ಆಗಿತ್ತು. ಅದೇ ರೀತಿ ಹರ್ಷಿಕಾ ಎರಡು ಬಿಗ್ ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಬೇಕಿತ್ತು. ಆ ಸಿನಿಮಾದ ಫೋಟೋಶೂಟ್, ಅಗ್ರಿಮೆಂಟ್ ಎಲ್ಲ ಮುಗಿದ ನಂತರ ಆ ಪ್ರೋಡಕ್ಷನ್ ಹೌಸ್ ಮ್ಯಾನೆಜರ್ ನೀವು ಕಮಿಟ್ ಮೆಂಟ್ ಗೆ ಒಪ್ಪಬೇಕು ಅಂತ ಹೇಳಿದನಂತೆ. ನಂತರ ಆ ಸಿನಿಮಾ ಬಿಟ್ಟು ಅವರ ಫೋನ್ ಕೂಡ ಹರ್ಷಿಕಾ ತೆಗೆಯಲಿಲ್ಲವಂತೆ.

”ನಾನು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ ಸೌತ್ ಇಂಡಸ್ಟ್ರಿಯಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ. ಬಾಲಿವುಡ್ ನಲ್ಲಿ ಮಾತ್ರ ಈ ರೀತಿಯ ನನಗೆ ಕೆಟ್ಟ ಅನುಭವ ಆಗಿದೆ.” ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೇ ಕನ್ನಡದ ನಟಿಯರಾದ ಶೃತಿ ಹರಿಹರನ್, ಹರಿಪ್ರಿಯಾ, ರಾಗಿಣಿ ದ್ವಿವೇದಿ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದರು.

Comments are closed.