ಮನೋರಂಜನೆ

ಕಿರಿಕ್ ನಗುವಿಗೆ ಫಿದಾ ಆದ್ರಾ ರಾಜಮೌಳಿ?

Pinterest LinkedIn Tumblr


‘ಕಿರಿಕ್’ ಬೆಡಗಿ ನಗುಮೊಗದ ಚೆಲುವೆ ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತಲೂ ಪರಭಾಷೆಗಳಿಂದ ಬರುತ್ತಿರುವ ಡಿಮ್ಯಾಂಡ್ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಕನ್ನಡದ ಹಲವು ಸ್ಟಾರ್ ನಟರ ಜತೆ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾಗೆ ತೆಲುಗಿನಲ್ಲೂ ಭರಪೂರ ಅವ ಕಾಶಗಳು ಲಭಿಸುತ್ತಿವೆ.

ನಾಗಶೌರ್ಯ ಜತೆ ‘ಚಲೋ’ ಚಿತ್ರದಲ್ಲಿ ನಟಿಸಿದ್ದ ಮಂದಣ್ಣ ಮೊದಲ ನೋಟದಲ್ಲೇ ತೆಲುಗು ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೀಗಾಗಿ ‘ಬ್ಯಾಕ್ ಟು ಬ್ಯಾಕ್’ ತೆಲುಗಿನ ಆಫರ್‌ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ ಯಂತೆ. ಇದೆಲ್ಲದರ ಮಧ್ಯೆಯೇ ‘ಬಾಹುಬಲಿ’ ಹೊಸ ಮೆಗಾ ಸಿನಿಮಾ ಕೈಗೆತ್ತಿ ಕೊಂಡಿರುವ ರಾಜಮೌಳಿ ಗಮನ ರಶ್ಮಿಕಾ ಮಂದಣ್ಣ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ತೆಲುಗಿನ ಸೂಪರ್ ಸ್ಟಾರ್ ನಟರಾದ ರಾಮ್ ಚರಣ್ ತೇಜ ಹಾಗೂ ಜ್ಯೂ.ಎನ್.ಟಿ.ಆರ್. ಅವರೊಂದಿಗೆ ಆರ್.ಆರ್.ಆರ್. ಸಿನಿಮಾ ಮಾಡುತ್ತಿರುವ ರಾಜಮೌಳಿ ಈ ಚಿತ್ರಕ್ಕೆ ನಾಯಕಿಯರ ತಲಾಶ್‌ನಲ್ಲಿದ್ದಾರೆ.

ಲೀಸ್ಟ್ ನಲ್ಲಿ ಮೊದಲಿಗೆ ರಾಕುಲ್ ಪ್ರೀತ್ ಸಿಂಗ್ ಹೆಸರು ಕೇಳಿ ಬಂದಿತ್ತು. ಬಳಿಕ ಸಮಂತಾ ಅಕ್ಕಿನೇನಿ, ರಾಶಿ ಖನ್ನಾ ಹಾಗೂ ಇದೀಗ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮುಂಚೂಣಿಯಲ್ಲಿದೆ. ಈಗಾಗಲೇ, ದಕ್ಷಿಣ ಭಾರತದಲ್ಲಿ ಸಾಕಷ್ಟು ಹವಾ ಹುಟ್ಟು ಹಾಕಿ ರುವ ಚಿತ್ರದ ಸ್ಕ್ರಿಪ್ಟ್ ವರ್ಕ್ ಮಾಡುತ್ತಿದ್ದಾರೆ ರಾಜಮೌಳಿ. ಚಿತ್ರತಂಡ ರಶ್ಮಿಕಾ ಅವರಿಗೆ ಆಫರ್ ಮಾಡಲು ಸಿದ್ಧತೆ ನಡೆಸಿದ್ದು, ಈ ಕುರಿತು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆಯಂತೆ.

‘ಚಲೋ’ ಅಂತ ತೆಲುಗಿನಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ನಾನಿ ವಿಜಯ್ ದೇವರಕೊಂಡ ನಟನೆಯ ಸಿನಿಮಾದಲ್ಲಿ ನಾಯಕಿ ಯಾಗಿ ಬಣ್ಣ ಹಚ್ಚಿದ್ದಾರೆ. ನಂತರ ನಾಣಿ ಅವರ ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾಳ ಮುಗ್ಧ ರಾಜ ಮೌಳಿ ಆ್ಯಂಡ್ ಟೀಂ ಬೌಲ್ಡ್ ಆದರೆ ಅಚ್ಚರಿಪಡುವಂಥದ್ದೇನಿಲ್ಲ.

Comments are closed.