ಮನೋರಂಜನೆ

ಮಾನ್ವಿತಾ ಕೇಳಿದ್ದಕ್ಕಿಂತ 10 ಲಕ್ಷ ಹೆಚ್ಚಿಗೆ ಕೊಡ್ತೀನಿ: ವರ್ಮ

Pinterest LinkedIn Tumblr


“ದುನಿಯಾ’ ಸೂರಿ ನಿರ್ದೇಶನದ “ಟಗರು’ ಚಿತ್ರವನ್ನು ನೋಡಿರುವ ರಾಮ್‌ ಗೋಪಾಲ್‌ ವರ್ಮ ಆ ಚಿತ್ರದ ಬಗ್ಗೆ ಫಿದಾ ಆಗಿದ್ದಾರೆ. ಚಿತ್ರ ನೋಡಿ ಖುಷಿಯಾಗಿರುವ ಅವರು ತಮ್ಮ ನಿರ್ಮಾಣದ ಚಿತ್ರವೊಂದನ್ನು ನಿರ್ದೇಶಿಸುವ ಅವಕಾಶವನ್ನು ಸೂರಿಗೆ ಕೊಡುವುದರ ಜೊತೆಗೆ ತಮ್ಮ ಮುಂದಿನ ಚಿತ್ರಕ್ಕೆ ಮಾನ್ವಿತಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮಾನ್ವಿತಾ ಎಷ್ಟು ಸಂಭಾವನೆ ಕೇಳುತ್ತಾರೋ, ಅದಕ್ಕಿಂತ 10 ಲಕ್ಷ ಹೆಚ್ಚು ಸಂಭಾವನೆ ಕೊಡುವುದಾಗಿ ಟ್ವೀಟ್‌ ಮಾಡಿದ್ದಾರೆ.

ಬುಧವಾರ ಸಂಜೆ ರಾಮ್‌ ಗೋಪಾಲ್‌ ವರ್ಮ ಅವರು ರಾಜಾಜಿನಗರದ ಒರಾಯನ್‌ ಮಾಲ್‌ನಲ್ಲಿ “ಟಗರು’ ಚಿತ್ರವನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಸೂರಿ, ಮಾನ್ವಿತಾ, ಧನಂಜನಯ್‌ ಮುಂತಾದವರೂ ಇದ್ದರು. ಚಿತ್ರವನ್ನು ನೋಡಿ ಫ‌ುಲ್‌ ಫಿದಾ ಆಗಿರುವ ವರ್ಮ, ಚಿತ್ರವನ್ನು ಅದ್ಭುತ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಮಾನ್ವಿತಾ ಹರೀಶ್‌ ಬರೀ ನಟಿಯಷ್ಟೇ ಅಲ್ಲ, ಅವರು ಕರೆಂಟು ಎಂದು ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ನಾನು “ಟಗರು’ ಚಿತ್ರ ನೋಡಿದ ತಕ್ಷಣ, ಮಾನ್ವಿತಾ ಅವರಿಗೆ ಟೋಕನ್‌ ಅಡ್ವಾನ್ಸ್‌ ಕೊಟ್ಟು, ನನ್ನ ಹೊಸ ಚಿತ್ರಕ್ಕೆ ಸೈನ್‌ ಮಾಡಿದ್ದೇನೆ. ಅಷ್ಟೇ ಅಲ್ಲ, ಆಕೆ ಅದೆಷ್ಟು ಸಂಭಾವನೆ ಕೇಳುತ್ತಾರೋ, ಅದಕ್ಕಿಂತ 10 ಲಕ್ಷ ಜಾಸ್ತಿ ಕೊಡುವುದಾಗಿ ಹೇಳಿದ್ದಾಗಿ ವಾಗ್ಧಾನ ಮಾಡಿದ್ದೇನೆ. ಇನ್ನು ಸೂರಿ ಅವರಿಗೂ ನನ್ನ ನಿರ್ಮಾಣದಲ್ಲಿ ಒಂದು ಚಿತ್ರ ಮಾಡಿಕೊಡಿ ಎಂದು ಕೇಳಿದ್ದೇನೆ’ ಎಂದು ವರ್ಮ ಟ್ವೀಟ್‌ ಮಾಡಿಕೊಂಡಿದ್ದಾರೆ.

-ಉದಯವಾಣಿ

Comments are closed.