ಮನೋರಂಜನೆ

ರೇಖಾ ನಿರ್ಮಾಣದಲ್ಲಿ ಡೆಮೊ ಪೀಸ್‌

Pinterest LinkedIn Tumblr


ರೇಖಾ ಮೂವೀಸ್‌ ಲಾಂಛನದಲ್ಲಿ “ಸ್ಪರ್ಶ’ ರೇಖಾ ಅವರು ನಿರ್ಮಿಸುತ್ತಿರುವ “ಡೆಮೊ ಪೀಸ್‌’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ಗಣೇಶನ ದೇವಸ್ಥಾನದಲ್ಲಿ ನೆರವೇರಿತು. ರಾಕಿಂಗ್‌ ಸ್ಟಾರ್‌ ಯಶ್‌ ಮುಹೂರ್ತ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

ವಿವೇಕ್‌.ಎ ಮೊದಲ ಬಾರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. “ಬ್ರಹ್ಮಗಂಟು’ ಧಾರಾವಾಹಿ ಭರತ್‌ ಭೂಪಣ್ಣ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರದಲ್ಲಿ ಅಭಿನಯಿಸುತ್ತಿರುವ ಸೋನಾಲ್‌ ಮಾಂಟೆರಿಯೊ ಈ ಚಿತ್ರದ ನಾಯಕಿ. ಖಳನಾಯಕನಾಗಿ ಚಕ್ರವರ್ತಿ ಚಂದ್ರಚೂಡ್‌ ಅಭಿನಯಿಸುತ್ತಿದ್ದಾರೆ.

ಸ್ಪರ್ಶ ರೇಖಾ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಂತ್‌ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್‌ ಅವರು ಬರೆದಿರುವ ನಾಲ್ಕು ಗೀತೆಗಳಿಗೆ ಶ್ರೀಚರಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಬಾಲಸರಸ್ವತಿ ಅವರದಾಗಿದೆ. ಏಪ್ರಿಲ್‌ ಎರಡನೇ ವಾರದಿಂದ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

-ಉದಯವಾಣಿ

Comments are closed.