ಮನೋರಂಜನೆ

ಸಂಕಷ್ಟದಲ್ಲಿರುವ ಪೂಜಾಗೆ ನೆರವಿನ ಸಹಾಯಹಸ್ತ ನೀಡಿದ ಸಲ್ಮಾನ್ ಖಾನ್

Pinterest LinkedIn Tumblr

ನವದೆಹಲಿ : 1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಮಾಜಿ ನಟಿ ಪೂಜಾ ದಾದ್ವಾಲ್, ಈಗ ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಆರ್ಥಿಕವಾಗಿ ತೀರಾ ದುಸ್ಥಿಯಲ್ಲಿರುವ ಈಕೆಗೆ ಇದೀಗ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಆಸ್ಪತ್ರೆಗೆ ತೆರಳಿ ಅಗತ್ಯ ನೆರವು ನೀಡುವುದಾಗಿ ಅವರು ಹೇಳಿದ್ದಾರೆ.

ಪೂಜಾ ದಾದ್ವಾಲ್’ರನ್ನು ಮುಂಬೈಯ ಸೆವಿರಿ ಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಅವಳ ಪತಿ ಮತ್ತು ಕುಟುಂಬದ ಸದಸ್ಯರು ಅವಳಿಂದ ದೂರ ಸರಿದಿದ್ದಾರೆ.

ಹೀಗಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಹಣವಿಲ್ಲದೆ, ನಟಿ ಪೂಜಾ ದಾದ್ವಾಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಹೀಗಾಗಿ ಪೂಜಾ ಹಿಂದೆ ತನ್ನ ಜೊತೆ ನಟಿಸಿದ್ದ ನಟ ಸಲ್ಮಾನ್ ಖಾನ್​ರಿಂದ ಸಹಾಯ ಕೋರಿದ್ದರು. ‘ಚಾರಿಟಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಸಂಸ್ಥಾಪಕರಾಗಿರುವ ಸಲ್ಮಾನ್ ಖಾನ್ ಭಾರತದಲ್ಲಿ ಶಿಕ್ಷಣ & ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಹೀಗಾಗಿ ನನ್ನ ಈ ಸ್ಥಿತಿ ನೋಡಿದರೆ ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಅದರಂತೆ ಇದೀಗ ಪೂಜಾಗೆ ಸಲ್ಮಾನ್ ಖಾನ್ ನೆರವು ನೀಡಲು ಮುಂದಾಗಿದ್ದಾರೆ.

ಪುರುಷರಿಗೆ ಬಂದಿದೆ ಗರ್ಭ ನಿರೋಧಕ ಮಾತ್ರೆ ! ಇದರ ಸಾಧಕ ಬಾಧಕದ ಬಗ್ಗೆ ತಿಳಿದುಕೊಳ್ಳಿ…

ಪುರುಷರಿಗಾಗಿ ಗರ್ಭ ನಿರೋಧಕ ಮಾತ್ರೆಯ ಮೇಲೆ ಪ್ರಯೋಗ ನಡೆದಿದ್ದು, ಅದು ಯಶಸ್ವಿಯಾಗಿದೆ. ದಿನದಲ್ಲಿ ಒಮ್ಮೆ ತೆಗೆದುಕೊಳ್ಳಲು ಇದು ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಮಹಿಳೆಯರ ಗರ್ಭ ನಿರೋಧಕ ಮಾತ್ರೆಯಂತೆ ಇದು ಕೂಡ ಕೆಲಸ ಮಾಡುತ್ತದೆ. ಇದು ಪುರುಷರ ಮಾತ್ರೆ ಆಗಿರುವುದರಿಂದ ಪುರುಷ ಹಾರ್ಮೋನ್‌ ಮೇಲೆ ನಿಯಂತ್ರಣ ಸಾಧಿಸಲಿದೆ.

ಹಾರ್ಮೋನ್‌ ಬದಲಾವಣೆ: ಕೆಲವು ಪರಿಮಳಯುಕ್ತ ಎಣ್ಣೆ ದೇಹಕ್ಕೆ ಆಹ್ಲಾದ ನೀಡಬಹುದು. ಮನಸ್ಸನ್ನು ಪ್ರಫುಲ್ಲಗೊಳಿಸಬಹುದು. ಆದರೆ ಅದರಿಂದ ಅಪಾಯವೂ ಇದೆ. ಅದೇನು ಅಂದರೆ ನಿಮ್ಮ ಸಹಜ ದೈಹಿಕ ಚಟುವಟಿಕೆ ಮೇಲೆ ಮಾರಕ ಪರಿಣಾಮ ಬೀರಬಹುದು. ವಿಶೇಷವಾಗಿ ಪುರುಷರು ಲ್ಯಾವೆಂಡರ್‌, ಟೀ ಟ್ರಿ ಆಯಿಲ್‌ನಂತಹ ಸುಗಂಧ ಭರಿತ ಎಣ್ಣೆಯನ್ನು ಬಳಸುವುದರಿಂದ ಹಾರ್ಮೋನ್‌ನ ನೈಸರ್ಗಿಕ ಕ್ರಿಯೆಗೆ ತೊಡಕು ಉಂಟಾಗುತ್ತದೆ ಎಂದು ಎಚ್ಚರಿಸಿದೆ ಸಂಶೋಧನೆ. ರಾಸಾಯನಿಕ ಮಿಶ್ರವಾಗಿರುವ ಸುಗಂಧದ ಎಣ್ಣೆಯ ಬಳಕೆಯಿಂದ ಪುರುಷರಲ್ಲಿ ಗೈನೆಕೊಮಾಸ್ಟಿಯಾ ಸಮಸ್ಯೆ ಕಾಣಿಸಬಹುದು. ಅಂದರೆ ಪುರುಷ ಸ್ತನಗಳ ಹಿಗ್ಗುವಿಕೆ ಎಂದರ್ಥ. ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಸಮಸ್ಯೆ.

ಆಹಾರದಲ್ಲಿ ವೈವಿಧ್ಯತೆಯಿರಲಿ: ವಯಸ್ಸಾದಂತೆ ನಿಮ್ಮ ಮಿದುಳಿನ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಇದಕ್ಕೆ ಆಹಾರ ಹಾಗೂ ದೈಹಿಕ ಚಟುವಟಿಕೆಯ ಪ್ರಭಾವ ಇದೆ. ಅಧ್ಯಯನಗಳ ಪ್ರಕಾರ, ಬೆರ್ರಿ, ತಾಜಾ ತರಕಾರಿ ಸೇವಿಸುವುದರ ಜತೆ ಆರೋಗ್ಯಪೂರ್ಣ ಜೀವನಶೈಲಿಯಿಂದ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಅಷ್ಟೆ ಅಲ್ಲ, ಹಣ್ಣು ತರಕಾರಿಗಳ ನಿಯಮಿತ ಸೇವನೆಯಿಂದ ಶ್ವಾಸಕೋಶದ ಕಾರ‍್ಯದಲ್ಲಿ ಯಾವುದೇ ತೊಡಕು ಕಾಣಿಸುವುದಿಲ್ಲ ಹಾಗೂ ರಕ್ತ ಸಂಚಲನೆ ಸರಾಗವಾಗುತ್ತದೆ ಎಂದು ಹೇಳಲಾಗಿದೆ.

ಅನಾರೋಗ್ಯ ಸೂಚಕ

ವೀರ್ಯಾಣುಗಳ ಚಲನೆ ಅಥವಾ ಸಂಖ್ಯೆಯಲ್ಲಿ ಕಡಿಮೆಯಾದರೆ ಗರ್ಭ ಧಾರಣೆಗೆ ತೊಡಕು ಉಂಟಾಗಲಿದೆ ಎಂಬುದನ್ನು ಹೊರತು ಪಡಿಸಿಯೂ ಇತರೇ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ ಎಂದು ಎಚ್ಚರಿಸಿದೆ ಇತ್ತೀಚಿನ ಅಧ್ಯಯನ. ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಹೊಂದಿರುವ ಪುರುಷರಲ್ಲಿ ಅನಾರೋಗ್ಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆಯಂತೆ. ಕೊಲಸ್ಟ್ರಾಲ್‌, ಅಧಿಕ ರಕ್ತದೊತ್ತಡ, ಮೂಳೆ ಸಮಸ್ಯೆಯಂತಹ ಸಮಸ್ಯೆಗಳನ್ನು ಹೊಂದಿರುವುದು ಕಂಡುಬಂದಿದೆ.

ಗರ್ಭಿಣಿಯರಿಗೆ ದಂತ ಆರೋಗ್ಯ ಮುಖ್ಯ: ಗರ್ಭ ಧಾರಣೆ ಅವಧಿಯಲ್ಲಿ ನಿಮ್ಮ ಹಲ್ಲಿನ ಆರೋಗ್ಯದ ಬಗ್ಗೆ ಸೂಕ್ತ ಗಮನ ಹರಿಸದಿದ್ದರೆ ಅದು ನಿಮ್ಮ ಮಗುವಿನ ಮೇಲೆ ಮಾರಕ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ ಇತ್ತೀಚಿನ ಸಂಶೋಧನೆ. ಗರ್ಭಾವಸ್ಥೆಯಲ್ಲಿ ಮಹಿಳೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎಷ್ಟು ಕೇರ್‌ ತೆಗೆದುಕೊಳ್ಳುತ್ತಾಳೋ ಅಷ್ಟು ಹುಟ್ಟುವ ಮಗು ಕೂಡ ಆರೋಗ್ಯವಾಗಿರುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಇದೀಗ ಗರ್ಭಿಣಿಯ ಮೌಖಿಕ ಆರೋಗ್ಯದ ಮೇಲೆ ಸಂಶೋಧನೆ ನಡೆದಿದ್ದು, ಗರ್ಭಾವಸ್ಥೆಯಲ್ಲಿ ಮೌಖಿಕ ಆರೋಗ್ಯವನ್ನು ನಿರ್ಲಕ್ಷಿಸಿದವರಿಗೆ ಜನಿಸಿದ ಮಗುವಿನಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ನಿಮ್ಮ ಕೈಗೆ ಹಾಕುವ ಮೆಹಂದಿ ಕಡು ಕೆಂಪಾಗಲು ಹೀಗೆ ಮಾಡಿ….!

ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ.ಅದರಲ್ಲೂ ಮದುಮಗಳ ಮೆಹಂದಿ ಹೈಲೈಟ್ಸ್‌ ಆಗಿರುತ್ತದೆ.

ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ ಮಾತ್ರ ನೋಡಲು ಆಕರ್ಷಕ. ಮೆಹಂದಿ ಹಚ್ಚಿದಾಗ ಕಡು ಕೆಂಪು ಬಣ್ಣಕ್ಕೆ ಬರಲು ಈ ಟಿಪ್ಸ್ ಪಾಲಿಸಿದರೆ ಸಾಕು:

* ಮೆಹಂದಿ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
* ರಾತ್ರಿ ಮಲಗುವ 2 ಗಂಟೆ ಮುಂಚೆ ಮೆಹಂದಿ ಹಚ್ಚಿ ಕೈಗಳನ್ನು ಅಲುಗಾಡಿಸದೆ ಮಲಗಿದರೆ ಮೆಹಂದಿ ಚೆನ್ನಾಗಿ ಹಿಡಿಯುತ್ತದೆ. ಹೀಗೆ ಮಾಡುವುದರಿಂದ ಮಲಗುವ ಮೊದಲೇ ಮೆಹಂದಿ ಒಣಗಿರುವುದರಿಂದ ಹಚ್ಚಿದ ವಿನ್ಯಾಸ ಹಾಳಾಗುವುದಿಲ್ಲ ಹಾಗೂ ರಾತ್ರಿಯಿಡೀ ಇರುವುದರಿಂದ ಬೆಳಗ್ಗೆ ಎದ್ದು ಕೈ ತೊಳೆಯುವಾಗ ಕಡು ಕೆಂಪಾಗಿರುತ್ತದೆ.

* ಮೆಹಂದಿ ಹಚ್ಚಿದ ಬಳಿಕ ಅರ್ಧ ಗಂಟೆಗೊಮ್ಮೆ ನಿಂಬೆ ಮತ್ತು ಸಕ್ಕರೆ ಮಿಕ್ಸ್ ಮಾಡಿದ ನೀರನ್ನು ಸಿಂಪಡಿಸಿ.

* ಮೆಹಂದಿಯನ್ನು ತೊಳೆದ ಬಳಿಕ ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ. ಹೀಗೆ ಮಾಡುವುದರಿಂದ ಮೆಹಂದಿ ಆಕರ್ಷವಾಗಿ ಕಾಣುವುದು.

ಪುರುಷರ ಸೆಕ್ಸ್ ಈ 5 ವಿಷಯಗಳಲ್ಲಿ ಅಪಾಯವನ್ನು ತಂದೊಡ್ಡಬಹುದು..ಹುಷಾರ್ !

ದಾಂಪತ್ಯ ಜೀವನದಲ್ಲಿ ಸೆಕ್ಸ್ ವಿಷಯ ಪ್ರಮುಖವಾದುದು. ಇದರಲ್ಲಿ ಸ್ವಲ್ಪ ಯಡವಟ್ಟಾದರೆ ಜೀವನವೇ ಏರುಪೇರಾಗುತ್ತದೆ. ಹಲವು ತೊಂದರೆಗಳಿಗೂ ಕಾರಣವಾಗುತ್ತದೆ. ಅಂಥ ತೊಂದರೆಗಳಲ್ಲಿ 5 ಈ ರೀತಿಯಿದೆ.

1) ಮೈತುಂಬ ಟೈಟಾದ ಬಟ್ಟೆ: ಮೈತುಂಬ ತುಂಬಾ ಟೈಟಾದ ಬಟ್ಟೆಗಳನ್ನ ಧರಿಸುವುದು ಕೆಲವರಿಗೆ ಫ್ಯಾಷನ್ ಎನಿಸಬಹುದು. ಆದರೆ ಸೆಕ್ಸ್ ಜೀವನಕ್ಕೆ ಇದು ಅಪಾಯವೇ ಸರಿ. ಮಿಲನದಲ್ಲಿ ತೊಡಗಿಕೊಳ್ಳುವಾಗ ಕಡಿಮೆ ತುಂಡು ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಸಂಭೋಗದ ವೇಳೆ ಅಡಚಣೆಯಾಗಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆಯಿದೆ.

2) ಮದ್ಯಪಾನ ಹೆಚ್ಚು ನಿಮಗೇ ಆಪತ್ತು: ಕೆಲವರು ಮದ್ಯಪಾನ ಹೆಚ್ಚು ಸೇವಿಸಿ ಸೆಕ್ಸ್’ನಲ್ಲಿ ತೊಡಗಿಕೊಂಡರೆ ಸುಖದ ಸುಪತ್ತಿಗೆಯಲ್ಲಿ ತೇಲಾಡಬಹುದು ಎಂದುಕೊಂಡಿದ್ದಾರೆ. ಆದರೆ ಅತಿಯಾದ ಮದ್ಯಪಾನ ತೊಂದರೆ ತರಬಲ್ಲದು.ಒಂದೆರಡು ಪೆಗ್ ಓಕೆ. ಹೆಚ್ಚಾದರೆ ನಿಮಿರು, ಸ್ಖಲನ ಸಮಸ್ಯೆ ಎದುರಿಸಬೇಕಾಗುತ್ತದೆ.

3) ಧೂಮಪಾನ : ಸಿಗರೇಟ್ ಬೀಡಿಯಂಥ ತಂಬಾಕುಗಳ ಸೇವನೆಯು ಸೆಕ್ಸ್ ಜೀವನಕ್ಕೆ ಅಪಾಯ ತರಬಲ್ಲದು. ಬರಬರುತ್ತಾ ವೀರ್ಯ ಪ್ರಮಾಣ ಕಡಿಮೆಯಾಗುತ್ತದೆ. ಬರುಬರುತ್ತಾ ವೀರ್ಯಗಳ ಚಲನಶೀಲತೆ ದುರ್ಬಲಗೊಳ್ಳುತ್ತದೆ. ಸಂತಾನೋತ್ಪತ್ತಿಗೂ ಡೇಂಜರ್.

4) ಒತ್ತಡ: ಒತ್ತಡ ಕೂಡ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಪದೇಪದೆ ಒತ್ತಡದಿಂದ ಇದ್ದರೆ ಸೆಕ್ಸ್ ಲೈಫ್ ಚೆನ್ನಾಗಿರುವುದಿಲ್ಲ. ಮಿಲನವ ವೇಳೆ ಶೀಘ್ರ ಸ್ಖಲನ ಸಮಸ್ಯೆ ಎದುರಿಸಬೇಕಾಗುತ್ತದೆ. ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಮನಸ್ಸನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವುದು ಕ್ಷೇಮ.

5) ರೋಗಗಳಿಂದ ದೂರವಿರಿ: ದೀರ್ಘಕಾಲದ ಕಾಯಿಲೆಗಳನ್ನು ನಿಮ್ಮನ್ನು ಕಾಡುತ್ತಿದ್ದರೆ ಲೈಂಗಿಕ ಜೀವನಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ಡಯಾಬಿಟಿಸ್, ಕಿಡ್ನಿ ಸಂಬಂಧಿತ ಕಾಯಿಲೆಗಳು, ಬಿಪಿ, ಕ್ಯಾನ್ಸರ್ ಇವುಗಳಲ್ಲಿ ಪ್ರಮುಖವಾದುದ್ದು. ಸಂತಾನೋತ್ಪತ್ತಿಗೂ ರೋಗಗಳು ಭಾಧಿಸುತ್ತವೆ. ವ್ಯಾಯಾಮ, ಚಟುವಟಿಕೆಯಿಂದ ರೋಗಗಳನ್ನು ಆದಷ್ಟು ತಡೆಯಿರಿ.

ನಿಮ್ಮ ತುಟಿಯ ಕಪ್ಪು ಬಣ್ಣ ಹೋಗಲಾಡಿಸಲು ಏನು ಮಾಡಬೇಕು ಗೊತ್ತೇ..?

ತೇವಾಂಶವಿರುವ ‘ಗ್ಲೋಸಿ ಲಿಪ್’ ಮುಖದ ಆಕರ್ಷಣೆ ಹೆಚ್ಚುವುದು. ತುಟಿ ಕಪ್ಪಗಿದ್ದರೆ ಕೆಲವೊಂದು ನೈಸರ್ಗಿಕ ವಿಧಾನದ ಮೂಲಕ ನಿಮ್ಮ ತುಟಿ ಸೌಂದರ್ಯ ಹೆಚ್ಚಿಸಬಹುದು ನೋಡಿ.

ನಿಮ್ಮ ತುಟಿ ನೈಸರ್ಗಿಕವಾಗಿ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ:

1. ಆಲೀವ್ ಎಣ್ಣೆ ಹಾಗೂ ಸಕ್ಕರೆ ಸ್ಕ್ರಬ್
ಸ್ವಲ್ಪ ಆಲೀವ್ ಎಣ್ಣೆಗೆ ಸಕ್ಕರೆ ಹಾಕಿ ಅದರಿಂದ ತುಟಿಯನ್ನು ಸ್ಕ್ರಬ್‌ ಮಾಡಬೇಕು. ಇದು ತುಟಿ ಮೇಲಿನ ಒಣ ತ್ವಚೆಯನ್ನು ತೆಗೆಯಲು ಸಹಾಯ ಮಾಡುತ್ತೆ. (ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ).

2. ನಂತರ ತುಟಿಯನ್ನು ಒಂದು ನಿಮಿಷ ಮೆಲ್ಲನೆ ಬ್ರೆಷ್‌ನಿಂದ ಉಜ್ಜಿ. ಇದು ಆ ಭಾಗದಲ್ಲಿ ರಕ್ತ ಸಂಚಲನ ಹೆಚ್ಚುವಂತೆ ಮಾಡುವುದು.

3. ತುಟಿಗೆ ಜೇನು ಹಚ್ಚಿ (ಜೇನು ಪ್ರತಿದಿನ ಹಚ್ಚಿ).

ಸಲಹೆ: ತುಟಿಗೆ ಬೀಟ್‌ ರೂಟ್‌ ರಸ, ಗುಲಾಬಿ ಎಸಳಿನ ರಸ ಹಚ್ಚಬಹುದು.
ಈ ರೀತಿ ಮಾಡುತ್ತಾ ಬಂದರೆ ಯಾವ ಲಿಪ್‌ ಗ್ಲೋಸ್ ಸಹಾಯವಿಲ್ಲದೆ ತುಟಿ ಸೌಂದರ್ಯ ಹೆಚ್ಚುವುದು.

ನಿಮ್ಮ ಸೌಂದರ್ಯ ಹೆಚ್ಚಿಸಲು ಪಪ್ಪಾಯಿ ಬಳಸಿ…ಬ್ಯೂಟಿ ಪಾರ್ಲರ್‌ ಅಗತ್ಯವೇ ಇಲ್ಲ !

ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಪಪ್ಪಾಯಿ ಬಳಸಿ ಸೌಂದರ್ಯ ಹೆಚ್ಚಿಸುವುದು ಹೇಗೆ ಎಂಬ ಟಿಪ್ಸ್‌ ನೀಡಿದ್ದೇವೆ ನೋಡಿ:

1.ಮುಖದಲ್ಲಿ ಕಪ್ಪು ಕಲೆಯೇ?
ಸ್ವಲ್ಪ ಪಪ್ಪಾಯಿ, 1 ಹನಿ ನಿಂಬೆ ರಸ, ಅರ್ಧ ಚಮಚ ಹನಿ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.

2. ಒಣ ತ್ವಚೆ ಸಮಸ್ಯೆಯೇ?
ಪಪ್ಪಾಯಿಯನ್ನು ಜೇನು ಜತೆ ಮಿಕ್ಸ್‌ ಮಾಡಿ ಹಚ್ಚುವುದು ತ್ವಚೆ ನುಣುಪಾಗುವುದು.

3. ಡಾರ್ಕ್‌ಸರ್ಕಲ್‌ ಬಿದ್ದಿದೆಯೇ?
ಪಪ್ಪಾಯಿಗೆ ಸ್ವಲ್ಪ ಆಲೀವ್‌ ಎಣ್ಣೆ ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗನೆ ನೆರಿಗೆಯೂ ಬೀಳುವುದಿಲ್ಲ.

4. ಮೊಡವೆ ಸಮಸ್ಯೆಯೇ?
ದಿನಾ 1 ಬೌಲ್‌ ಪಪ್ಪಾಯಿ ತಿನ್ನಿ. ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುವುದು.

5. ತ್ವಚೆ ಕಾಂತಿ ಹೆಚ್ಚಬೇಕೆ?
ವಾರದಲ್ಲಿ 3-4 ಬಾರಿ ಪಪ್ಪಾಯಿ ಮಾಸ್ಕ್‌ ಹಾಕಿದರೆ ಮುಖದ ಕಾಂತಿ ಹೆಚ್ಚುವುದು.

ಇವುಗಳಿಂದ ಹಲ್ಲುಜ್ಜಿದರೆ ಖಂಡಿತವಾಗಿಯು ನಿಮ್ಮ ಹಲ್ಲುಗಳ ಬಿಳುಪು ಹೆಚ್ಚುವುದು !

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುವುದು. ಮುತ್ತಿನಂಥ ಹಲ್ಲುಗಾಗಿ ದಂತ ವೈದ್ಯರನ್ನು ಭೇಟಿಯಾಗ ಬೇಕಾಗಿಲ್ಲ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಸುಂದರ ಹಲ್ಲುಗಳು ನಿಮ್ಮದಾಗುವುದು.

ತೆಂಗಿನೆಣ್ಣೆ
ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜತೆಗೆ ಬಾಯಿ ದುರ್ವಾಸನೆ ಇಲ್ಲವಾಗುವುದು.

ಆ್ಯಪಲ್ ಸಿಡರ್‌ ವಿನೆಗರ್
ಸ್ವಲ್ಪ ಆ್ಯಪಲ್ ಸಿಡರ್‌ ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ. ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುವುದು.

ನಿಂಬೆಹಣ್ಣಿನ ಸಿಪ್ಪೆ
ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು.

ಸ್ಟ್ರಾಬೆರಿ
ಹಲ್ಲು ಹಳದಿ ಬಣ್ಣದಲ್ಲಿದ್ದರೆ ಸ್ಟ್ರಾಬೆರಿಯಿಂದ ತಿಕ್ಕಿದರೆ ಬಿಳುಪು ಹಲ್ಲು ನಿಮ್ಮದಾಗುವುದು.

ಅಡುಗೆ ಸೋಡಾ
ಸ್ವಲ್ಪ ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಕಲೆಸಿ ಬ್ರೆಷ್‌ಗೆ ಹಾಕಿ ಹಲ್ಲುಜ್ಜಿದರೆ ಹಲ್ಲು ಬೆಳ್ಳಗಾಗುವುದು.

ಪುರುಷರರು ಈ ಟಿಪ್ಸ್ ಬಳಸಿದರೆ ಆಕರ್ಷಕವಾಗಿ ಕಾಣುತ್ತೀರಿ…

ಸ್ಕಿನ್ ಕೇರ್‌ ಎನ್ನುವುದು ಮಹಿಳೆಯರಿಗಷ್ಟೇ ಸೀಮಿತವಲ್ಲ. ಸ್ಕಿನ್‌ಕೇರ್‌ ಹಾಗೂ ಡ್ರೆಸ್ಸಿಂಗ್‌ ಕಡೆ ಗಮನ ನೀಡಿದರಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ.

ಆಕರ್ಷಕವಾದ ಲುಕ್ ನಮ್ಮ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದರಲ್ಲಿ ನೋ ಡೌಟ್. ಇಲ್ಲಿ ಪುರುಷರ ತ್ವಚೆ ಸೌಂದರ್ಯ ಹೆಚ್ಚಿಸಲು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ.

1. ನೀರು ಕುಡಿಯಿರಿ
ತ್ವಚೆ ಆರೈಕೆಗೆ ಮೊದಲು ಮಾಡಬೇಕಾಗಿರುವುದು ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 2 ಲೀಟರ್‌ ನೀರು ಕುಡಿಯಲೇಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಡ್ರೈಯಾಗುವುದು.

2. ಮಾಯಿಶ್ಚರೈಸರ್‌ ಹಚ್ಚಿ
ಪ್ರತೀದಿನ ಮಾಯಿಶ್ಚರೈಸರ್‌ ಹಚ್ಚಿ. ಶೇವಿಂಗ್ ಬಳಿಕ ಮಾಯಿಶ್ಚರೈಸರ್‌/ ಆಫ್ಟರ್‌ ಶೇವ್‌ ಮಾಡಲು ಮರೆಯದಿರಿ.

3. ಸನ್‌ಸ್ಕ್ರೀನ್
ಬಿಸಿಲಿಗೆ ಓಡಾಡುವಾಗ ಸನ್‌ಸ್ಕ್ರೀನ್‌ ಲೋಷನ್ ಬಳಸಿ.

4. ಹಣ್ಣು ತರಕಾರಿ ತಿನ್ನಿ
ಬ್ರೇಕ್‌ಫಾಸ್ಟ್‌ ಹಾಗೂ ಡಿನ್ನರ್‌ ಜತೆ ಒಂದು ಬೌಲ್‌ ಬೇಯಿಸಿದ ತರಕಾರಿ ಹಾಗೂ ಹಣ್ಣು ತಿನ್ನಿ.

5. ವ್ಯಾಯಾಮ
ದಿನದಲ್ಲಿ ಒಂದು ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಇದರಿಂದ ಸೌಂದರ್ಯದ ಜತೆಗೆ ಆರೋಗ್ಯ ಹೆಚ್ಚಾಗುವುದು.

6. ನಿದ್ದೆ
ಹಾಸಿಗೆಯಲ್ಲಿ ಮಲಗಿದ ಮೇಲೆ ಪುನಃ ಮೊಬೈಲ್‌ ನೋಡುವ ಅಭ್ಯಾಸ ಬೇಡ, ಮೊಬೈಲ್‌ ದೂರವಿಟ್ಟು 8 ಗಂಟೆ ನಿದ್ದೆ ಮಾಡಿ.

ಯಾವುದೇ ಕಾರಣಕ್ಕೂ ಪತ್ನಿ ಮುಂದೆ ಈ ಪ್ರಶೆಗಳನ್ನು ಮಾತ್ರ ಕೇಳಬೇಡಿ….ಕೇಳಿದ್ರೆ ಏನಾಗುತ್ತೆ..?

ಎಷ್ಟೇ ಅನ್ಯೋನ್ಯತೆ ಇದ್ದರೂ ಕೆಲವು ವಿಷಯಗಳು ಮಾತ್ರ ಪತ್ನಿ ತನ್ನ ಪತಿಯಿಂದಲೂ ಕೇಳಲು ಬಯಸುವುದಿಲ್ಲ. ಈ ಗುಟ್ಟನ್ನು ಅರಿತ ಸಂಸಾರ ಸುಖಮಯವಾಗಿರುತ್ತದೆ. ದಂಪತಿ ನಡುವೆ ವೈಮನಸ್ಸು ಮೂಡದೇ ಇರಲು ಹಾಗೂ ಶಾಂತಿಯುತ ಜೀವನಕ್ಕಾಗಿ ಹಲವು ಬಾರಿ ಪತಿ ಮೌನವಹಿಸುವುದೇ ಮೇಲು. ಸಾಮಾನ್ಯವಾಗಿ ಪತಿಯರು ತಮ್ಮ ಮನಸ್ಸಿಗೆ ಬಂದ ಪದಗಳನ್ನು ಅರಿವಿಲ್ಲದೇ ಉಪಯೋಗಿಸಿದ ಬಳಿಕ ಪ್ರಾರಂಭವಾದ ಮುನಿಸು ಯಾವಾಗ ಜಗಳಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ದಂಪತಿಗಳಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಪತ್ನಿ ಮುನಿಸಿಕೊಳ್ಳಬಾರದು ಅಂದರೆ ಕೇಳಲೇಬಾರದ ಕೆಲವು ಪ್ರಶ್ನೆಗಳು ಇಲ್ಲಿವೆ.

ಶಾಪಿಂಗ್‌ಗಾಗಿ ಎಷ್ಟು ಖರ್ಚು ಮಾಡಿದೆ?

ಈ ಪ್ರಶ್ನೆಯಿಂದ ಮನೆಯಲ್ಲಿ ಯುದ್ಧ ಪ್ರರಾಂಭವಾಗಬಹುದು. ಇದು ಆಕೆಯ ಮನೋಭಾವವನ್ನೇ ಬದಲಿಸಬಹುದು. ಶಾಪಿಂಗ್‌ ಮೂಲಕ ಆಕೆ ಪಡೆದ ಸಂತೋಷ, ನೆಮ್ಮದಿ, ಸುಖವನ್ನೆಲ್ಲಾ ನಿಮ್ಮ ಈ ಒಂದು ಪ್ರಶ್ನೆ ನೀರಾಗಿಸಿ ಆ ಸ್ಥಳದಲ್ಲಿ ಹತಾಶೆ, ಕೋಪ, ದುಃಖ, ದುಮ್ಮಾನ, ಅಸಹ್ಯ, ತಿರಸ್ಕಾರ ಭಾವ ಮೂಡಬಹುದು. ಆಕೆ ಶಾಪಿಂಗ್‌ ಮಾಡಿದ ಹಣ ನಿಮ್ಮ ಗಳಿಕೆಯಾಗಿರಬಹುದು ಅಥವಾ ಆಕೆಯ ಗಳಿಕೆಯೇ ಆಗಿರಬಹುದು, ಆದರೆ ಸಂಸಾರದಲ್ಲಿ ಕಲಹ ಬರಬಾರದೆಂದರೆ ಈ ಖರ್ಚು ಆಕೆಯ ಸಂತೋಷಕ್ಕಿಂತ ಮಿಗಿಲಾದುದಿಲ್ಲ ಎಂಬುದನ್ನು ಪರಿಗಣಿಸಿ ಸುಮ್ಮನಿರುವುದೇ ಉತ್ತಮ.

ಇಷ್ಟೊಂದು ಮೇಕಪ್‌ ಮಾಡಬೇಕೆÜ?

ಪ್ರಶ್ನೆ ಕೇಳಿದ ಬಳಿಕ ಪತಿಗೆ ಮೌನವೇ ಉತ್ತರವಾಗಿ ದೊರಕುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಶೇ.80ಕ್ಕೂ ಹೆಚ್ಚು ದಂಪತಿಗಳ ನಡುವಣ ಕಾಳಗಕ್ಕೆ ಈ ಪ್ರಶ್ನೆ ಕಾರಣ. ಹೆಣ್ಣು ಸೌಂದರ್ಯಪ್ರಿಯಳಾಗಿದ್ದು ನಿಮ್ಮ ಪತ್ನಿಯೂ ಇದಕ್ಕೆ ಹೊರತಲ್ಲ. ಹೊರಹೋಗುವ ಸಂದರ್ಭದಲ್ಲಿ ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಕಾರಣದಿಂದ ಪ್ರತಿ ಹೆಣ್ಣು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಾಳೆ. ಕೆಲವರಿಗೆ ಇದು ಕೊಂಚ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಈ ಪ್ರಶ್ನೆ ಮಹಿಳೆಯರಿಗೆ ತಮ್ಮ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟಿನ ರೂಪದಲ್ಲಿ ಕೇಳಿಸುತ್ತದೆ. ಆದ್ದರಿಂದ ಆಕೆ ತನ್ನ ಅಲಂಕಾರಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡರೂ ಪರವಾಗಿಲ್ಲ, ಈ ಪ್ರಶ್ನೆಯನ್ನು ಮಾತ್ರ ಕೆಳದೆ ಇರುವುದೇ ಉತ್ತಮ.

ನನ್ನ ಫೋನನ್ನೇಕೆ ಪರೀಕ್ಷಿಸಿದೆ?

ನಿಮ್ಮ ಫೋನನ್ನು ನಿಮ್ಮ ಪತ್ನಿ ಮಾತ್ರವಲ್ಲ ಗುಟ್ಟಾಗಿ ಇತರರೂ ಪರಿಶೀಲಿಸುತ್ತಾರೆ. ಬೇಕಾದರೆ ನಿಮ್ಮ ಸ್ನೇಹಿತರನ್ನೇ ಕೇಳಿ ನೋಡಿ. ಹೆಚ್ಚಿನ ಪತ್ನಿಯರು ತಮ್ಮ ಪತಿಯರ ಫೋನ್‌ ಅನ್ನು ಪರಿಶೀಲಿಸುವುದು ಸಾಮಾನ್ಯ. ಒಂದು ವೇಳೆ ನೀವು ನಿಮ್ಮ ಪತ್ನಿಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೀರೇ ಆದರೆ ನಿಮ್ಮ ಫೋನನ್ನು ಸಂಪೂರ್ಣವಾಗಿ ಪರಿಶೀಲಿಸಲು ಆಕೆಗೆ ಅವಕಾಶ ಮಾಡಿ ಕೊಡಿ.

ತವರಿಗೇಕೆ ಹೋಗುವುದು?

ನಿಮಗೆ ಆಕೆಯ ಮನೆಯವರು ಇಷ್ಟವಿಲ್ಲದಿದ್ದರೂ ಆಕೆಗೆ ತವರಿನ ಸದಸ್ಯರೆಂದರೆ ಈಗಲೂ ಆತ್ಮೀಯರೇ ಹೌದು. ಆದ್ದರಿಂದ ಈ ಪ್ರಶ್ನೆಯನ್ನು ಕೇಳದೇ ಇದ್ದಷ್ಟೂ ನಿಮಗೆ ಒಳ್ಳೆಯದು. ಒಂದು ವೇಳೆ ಕೇಳಿದರೆ ನಿಮ್ಮನ್ನು ಆಕೆ ದ್ವೇಷಿಸಲು ಪ್ರಾರಂಭಿಸಬಹುದು. ಇದು ದಂಪತಿಗಳ ನಡುವಣ ದೂರವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಆಕೆ ನೋಡಲು ಚೆನ್ನಾಗಿದ್ದಾಳೆ

ಈ ಮಾತನ್ನು ಹೇಳಿದರೆ ಏನಾಗುತ್ತದೆಂದು ಬಹುಶಃ ಬಹಳಷ್ಟು ಗಂಡಸರಿಗೆ ಗೊತ್ತು. ಯಾವ ಹೆಣ್ಣು ತನ್ನ ಗಂಡ ತನ್ನ ಮುಂದೆಯೇ ಇನ್ನೊಬ್ಬಾಕೆಯ ಸೌಂದರ್ಯವನ್ನು ಹೊಗಳುವುದನ್ನು ಸಹಿಸಿಕೊಳ್ಳುವುದಿಲ್ಲ. ಈ ಮಾತು ಹೇಳಿದಿರಿ.

ನನಗೆ ಮಾತನಾಡೋದಿಕ್ಕೆ ಮನಸ್ಸಿಲ್ಲ

ಈ ಮಾತನ್ನು ಯಾವಾಗಲೋ ಒಮ್ಮೆ ಹೇಳಿದರೆ ಸರಿ. ಆದರೆ ನಿಮ್ಮಾಕೆಯ ಮಾತನ್ನು ಕೇಳುವುದರಿಂದ ಉದ್ದೇಶಪೂರ್ವಕವಾಗಿ ನುಣುಚಿಕೊಳ್ಳಲು ಈ ಮಾತು ಹೇಳಬೇಡಿ.

Comments are closed.