ಮನೋರಂಜನೆ

ಬಾಲಿವುಡ್‌ ನಟಿ ಶ್ರೀದೇವಿ ಸಾವಿಗೆ ಅಮೂಲ್ ಭಾವನಾತ್ಮಕ ಗೌರವ

Pinterest LinkedIn Tumblr


ನವದೆಹಲಿ: ಬಾಲಿವುಡ್‌ ನಟಿ ಶ್ರೀದೇವಿ ಅವರ ಅನಿರೀಕ್ಷಿತ ಸಾವಿಗೆ ಹೈನುಗಾರಿಕೆ ಕ್ಷೇತ್ರದ ದೈತ್ಯ ಅಮೂಲ್‌ ಸಂಸ್ಥೆ ಟ್ವಿಟರ್‌ನಲ್ಲಿ ಭಾವನಾತ್ಮಕ ಗೌರವ ಸೂಚಿಸಿದೆ.

ಹಾಸ್ಯ / ಚಿಂತನೆಗೆ ಪ್ರಚೋದಿಸುವ ರೇಖಾಚಿತ್ರಗಳಿಗೆ ಹೆಸರುವಾಸಿಯಾಗಿರುವ ಅಮುಲ್‌ ಸಹಕಾರ ಸಂಸ್ಥೆ, ಈಗ ಅಗಲಿದ ನಟಿ ಶ್ರೀದೇವಿಗೆ ತಡವಾಗಿ ಹೃತ್ಪೂರ್ವಕ ಗೌರವವನ್ನು ಸಲ್ಲಿಸಿದೆ.

#Amul Topical: Tribute to Sridevi, one of Bollywood’s favourite superstar… pic.twitter.com/P60dWuWvwQ

— Amul.coop (@Amul_Coop) February 26, 2018

ಅಮೂಲ್ ಟ್ವೀಟ್‌ ಮಾಡಿರುವ ಚಿತ್ರದಲ್ಲಿ ನಟಿ ಶ್ರೀದೇವಿ ಅವರನ್ನು ಸ್ಕೆಚ್‌ ಮಾಡಿ ಗೌರವ ಸೂಚಿಸಿದೆ.

ನಟಿ ಶ್ರೀದೇವಿ ತನ್ನ ಕುಟುಂಬದೊಂದಿಗೆ ವಿವಾಹ ಸಮಾರಂಭಕ್ಕೆಂದು ದುಬೈಗೆ ತೆರಳಿದ್ದ ವೇಳೆ ಮೃತಪಟ್ಟಿದ್ದರು. ಮಂಗಳವಾರ ದುಬೈನಿಂದ ಪಾರ್ಥೀವ ಶರೀರ ಮುಂಬೈಗೆ ಬರಲಿದ್ದು ನಂತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವರದಿಗಳು ತಿಳಿಸಿದ್ದವು.

Comments are closed.