ಮನೋರಂಜನೆ

ಪ್ರೀತಿ ಜಿಂಟಾ ಕೇಸ್‌: 4 ವರ್ಷ ಬಳಿಕ ಚಾರ್ಜ್‌ಶೀಟ್‌

Pinterest LinkedIn Tumblr


ಮುಂಬಯಿ: ನಾಲ್ಕು ವರ್ಷಗಳ ಹಿಂದೆ ನಟಿ ಪ್ರೀತಿ ಜಿಂಟಾ, ಉದ್ಯಮಿ ನೆಸ್‌ ವಾಡಿಯಾ ವಿರುದ್ಧ ದಾಖಲಿಸಿದ್ದ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಮೊಕದ್ದಮೆ ಸಂಬಂಧ ಮುಂಬಯಿ ಪೊಲೀಸರು ಈಗ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದನ್ನು ಕೇಸು ದಾಖಲಿಸಿ 4 ವರ್ಷಗಳ ಬಳಿಕ ಈ ಕೇಸಿನ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಇಬ್ಬರೂ ಐಪಿಎಲ್‌ ಕ್ರಿಕೆಟ್‌ ತಂಡ “ಕಿಂಗ್ಸ್‌ ಇಲವೆನ್‌ ಪಂಜಾಬ್‌’ನ ಸಹ ಮಾಲೀಕರಾಗಿದ್ದರು. ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯವೊಂದು ನಡೆಯುತ್ತಿದ್ದ ವೇಳೆ ವಾಡಿಯಾ ತನ್ನನ್ನು ಆಕ್ಷೇಪಾರ್ಹವಾಗಿ ನಡೆಸಿಕೊಂಡರು ಎಂದು ಜಿಂಟಾ ದೂರು ನೀಡಿದ್ದರು.

-ಉದಯವಾಣಿ

Comments are closed.