ಮನೋರಂಜನೆ

ಗಂಡಸುತನ ತೊಡೆ ತಟ್ಟುವುದರಿಂದ ಸಾಬೀತಾಗಲ್ಲ; ಜಗ್ಗೇಶ್‌ಗೆ ಪ್ರಕಾಶ್‌ ರೈ ತಿರುಗೇಟು

Pinterest LinkedIn Tumblr

ಬೆಂಗಳೂರು: ದೇಶ ಆಳುವ ಅರ್ಹತೆ ಕುರಿತಂತೆ ನಟ ಜಗ್ಗೇಶ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ ಅವರು ಪ್ರತಿಕ್ರಿಯೆ ನೀಡಿದ್ದು, ತೊಡೆ ತಟ್ಟುವುದು ಗಂಡುತನ ಎನ್ನುವ ನಿಮ್ಮ ಮನಸು, ಮಾತು ಸರಿಯಲ್ಲ, ಅಸಭ್ಯವಾಗಿದೆ ಎಂದು ಭಾನುವಾರ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟ ಪ್ರಕಾಶ್ ರಾಜ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ಜಗ್ಗೇಶ್ ಅವರು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಕಾಶ್ ರೈ ಫೋಟೋ ಸಹಿತ ಮೋದಿಗೆ ದೇಶ ಆಳುವ ಅರ್ಹತೆ ಎನ್ನುವ ರೈ ಅವರ ಹೇಳಿಕೆಯನ್ನು ಪ್ರಕಟಿಸಿ ಮೂರು ಟ್ವೀಟ್ ಪ್ರಕಟಿಸಿದ್ದರು.

ಈ ಎಲ್ಲಾ ಪ್ರಶ್ನೆಗಳಿಗೂ ಇಂದು ಪ್ರಕಾಶ್ ರೈ ಅವರು ಇದೇ ವೇದಿಕೆಯಲ್ಲಿಯೇ ಉತ್ತರವನ್ನು ನೀಡಿದ್ದಾರೆ. ಗೆದ್ದು ತೊಡೆ ತಟ್ಟಲು ಇದು ರಾಜಕೀಯ ಕಬಡ್ಡಿ ಆಟವಲ್ಲ…ತಾವು ಕಲಾವಿದರು ದಯವಿಟ್ಟು ಬಳಸುವ ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ತಾಯಂದಿರು…ಅಕ್ಕ ತಂಗಿಯರು, ಬಹಳಷ್ಟು ಹೆಣ್ಣು ಮಕ್ಕಳು ತಮ್ಮನ್ನ ಅಭಿಮಾನದಿಂದ ಬೆಳೆಸಿದ್ದಾರೆ…ಗಮನಿಸುತ್ತಿದ್ದಾರೆ. ತೊಡೆ ತಟ್ಟುವುದು ಗಂಡಸುತನ ಎನ್ನುವ ನಿಮ್ಮ ಮನಸು…ಮಾತು ಸರಿಯಲ್ಲ, ಅಸಭ್ಯವಾಗಿದೆ. ಒಬ್ಬರ ಗಂಡಸುತನ ತೊಡೆ ತಟ್ಟುವುದರಿಂದ ರುಜುವಾತಾಗುವುದಿಲ್ಲ ನಿಮಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ.

ಸಂವಿಧಾನವನ್ನು ಬದಲಿಸುತ್ತೇನೆ ಎನ್ನುವ ನಿಮ್ಮ ಪಕ್ಷದ ಸಂಸದರನ್ನ, ಒಂದು ಕೋಮಿನವರನ್ನ ಈ ಭೂಮಿಯಿಂದಲೇ ಅಳಿಸಬೇಕು ಎಂದು ವಿಷ ಕಾರುವ ನಿಮ್ಮ ಪಕ್ಷದ ಸಂಸದರನ್ನ, ಸೊಂಟದ ಕೆಳಗಿನ ಅಸಭ್ಯ ಮಾತನಾಡುವ ನಿಮ್ಮ ಪಕ್ಷದ ಸದಸ್ಯರನ್ನ, ಜಾತ್ಯಾತೀತರ ತಂದೆ ತಾಯಿಯರನ್ನು ಅಸಭ್ಯವಾಗಿ ಜರಿಯುವ ನಿಮ್ಮ ಪಕ್ಷದ ಸಂದರನ್ನ ಇಂತಹ ನಾಯಕರನ್ನ ಕಾಪಾಡುವ ನಿಮ್ಮ ಪಕ್ಷವನ್ನ ಅದರ ನಾಯಕರನ್ನು ಪ್ರಶ್ನಿಸಲು ನೀವು ಹೇಳುವ ಯಾವ ಅರ್ಹತೆಗಳೂ ಬೇಡ. ಮನುಷ್ಯರನ್ನ ಮನುಷ್ಯರನ್ನಾಗಿ ನೋಡುವ ಮಾನವೀಯ ಹೃದಯವೊಂದಿದ್ದರೆ ಸಾಕು ಎಂಟು ಟ್ವೀಟ್ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ನನ್ನ ಪ್ರಕಾರ ಗಂಡಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ: ನಟ ಜಗ್ಗೇಶ್
ಪ್ರಕಾಶ್ ಅವರ ಟ್ವೀಟ್ ಮರು ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಅವರು, ಗಂಡಸುತನ ಅಂದಿದ್ದಕ್ಕೆ ಅಸಹ್ಯ ಎನಿಸಿದೇ ನಿಮಗೆ? ನನ್ನ ಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟವೆಂದು. ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು. ನನ್ನ ಬದ್ಧತೆ ಕನ್ನಡ ನೆಲ ಕನ್ನಡ ಚಿತ್ರರಂಗ ಕನ್ನಡಿಗರು ಮಾತ್ರ ಸಹೋದರ. ಜೀವನ ಪೂರ್ತಿ ತಮಿಳು ಸೇವೆ ಮಾಡಿ, ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ ಎಂದು ವ್ಯಂಗ್ಯವಾಡಿದ್ದಾರೆ.

Comments are closed.