ಮನೋರಂಜನೆ

ಬಾಲಿವುಡ್​ ಹಿರಿಯ ನಟ ಜೀತೇಂದ್ರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

Pinterest LinkedIn Tumblr

ಶಿಮ್ಲಾ: ಬಾಲಿವುಡ್​​ನ ಹಿರಿಯ ನಟ ಜೀತೇಂದ್ರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. 47 ವರ್ಷದ ಹಿಂದೆ ತಮ್ಮ ಸೋದರ ಸಂಬಂಧಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬುಧವಾರ ದೂರು ದಾಖಲಾಗಿದೆ.

ಜೀತೇಂದ್ರ ಅವರ ಮೂಲ ಹೆಸರು ರವಿ ಕಪೂರ್​ ಆಗಿದ್ದು, ಇವರು ಸಂತ್ರಸ್ತೆಯ ಸೋದರತ್ತೆಯ ಮಗ. ದೌರ್ಜನ್ಯ ಕುರಿತು ಹಿಮಾಚಲ ಪ್ರದೇಶದ ಪೊಲೀಸ್​ ಮಹಾ ನಿರ್ದೇಶಕರ ಬಳಿ ದೂರು ದಾಖಲಾಗಿದೆ.

1971 ರಂದು ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆ ವೇಳೆ ಸಂತ್ರಸ್ತೆಯ ವಯಸ್ಸು 18 ಹಾಗೂ ಜೀತೇಂದ್ರ ಅವರಿಗೆ 28 ವರ್ಷ ವಯಸ್ಸಾಗಿತ್ತು. ಶಿಮ್ಲಾದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನೋಡಲು ತಮ್ಮ ಸೋದರ ಸಂಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಂದು ಚಿತ್ರೀಕರಣ ಮುಗಿಸಿ ರಾತ್ರಿ ವಾಪಸು ಶಿಮ್ಲಾಗೆ ಬಂದಾಗ ಜೀತೇಂದ್ರ ಅವರು ಕುಡಿದ ಮತ್ತಿನಲ್ಲಿ ನನ್ನ ಕೊಠಡಿಗೆ ಬಂದು ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

#ಮೀ ಟೂ ಅಭಿಯಾನದ ನಡುವೆ ಈ ಆರೋಪ ಕೇಳಿಬಂದಿದ್ದು, ಸಂತ್ರಸ್ತೆಯು ಪ್ರಭಾವಶಾಲಿ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾಳೆ. ಅಲ್ಲದೆ, ಈ ಅಭಿಯಾನದ ಅಡಿಯಲ್ಲಿ ಹಲವು ಮಹಿಳೆಯರು ಬಾಲಿವುಡ್​ ಪ್ರಭಾವಶಾಲಿ ಹಾಗೂ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಅಕ್ರಮದ ಧ್ವನಿಯೆತ್ತಿದ್ದಾರೆ.

Comments are closed.