ರಶ್ಮಿಕಾ ಮಂದಣ್ಣ ಅಭಿನಯದ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಿವೆ. ಆ ಪೈಕಿ ಅಂಜನಿಪುತ್ರ 50 ದಿನಗಳತ್ತ ಸಾಗಿದರೆ, ಚಮಕ್ 25 ದಿನಗಳನ್ನು ಮುಗಿಸಿವೆ. ಅಲ್ಲಿಗೆ ಕಳೆದ ವರ್ಷದ ಯಶಸ್ವಿ ನಟಿಯರ ಸಾಲಿಗೆ ರಶ್ಮಿಕಾ ಅವರನ್ನು ಸಹ ಸೇರಿಸಿಬಿಡಬಹುದು.
ಈ ಮಧ್ಯೆ ರಶ್ಮಿಕಾ ತೆಲುಗಿನ ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ, ನಾಗಶೌರ್ಯ ಎದುರು ನಾಯಕಿಯಾಗಿ ಅಭಿನಯಿಸಿದ್ದಾರೆ. ಚಲೋ ನಲ್ಲಿ ರಶ್ಮಿಕಾ ಜೊತೆಗೆ ಕನ್ನಡದ ಅಚ್ಯುತ್ ಕುಮಾರ್ ಸಹ ನಟಿಸಿರುವುದು ವಿಶೇಷ. ಈ ಚಿತ್ರವನ್ನು ವೆಂಕಿ ಕುದುಮುಲ ನಿರ್ದೇಶಿಸಿದ್ದು, ಮಹತಿ ಸ್ವರಸಾಗರ್ ಸಂಗೀತ ಸಂಯೋಜಿಸಿದ್ದಾರೆ.
ಇದಲ್ಲದೆ ತೆಲುಗಿನಲ್ಲಿ ವಿಜಯ್ ದೇವರಕೊಂಡ ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ, ರಶ್ಮಿಕಾ ಕೈಯಲ್ಲಿ ಸದ್ಯಕ್ಕೆ ಯಾವುದೇ ಚಿತ್ರ ಇಲ್ಲ. ಪೊಗರು ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. “ಇನ್ನೊಂದಿಷ್ಟು ಚಿತ್ರಗಳ ಮಾತುಕತೆಯಾಗುತ್ತಿದೆಯಾದರೂ, ಅವೆÇÉಾ ಪಕ್ಕಾ ಆದಮೇಲಷ್ಟೇ ಹೇಳ್ಳೋದಕ್ಕೆ ಸಾಧ್ಯ’ ಎನ್ನುತ್ತಾರೆ ರಶ್ಮಿಕಾ.
ಎಲ್ಲಾ ಸರಿ ಮುಂದೇನು ಎಂದರೆ, ದರ್ಶನ್ ಅಭಿನಯದ 51ನೇ ಚಿತ್ರ ಕಣ್ಣ ಮುಂದೆ ಬರುತ್ತದೆ. ಆ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಾಗಲೇ ದರ್ಶನ್ ಜೊತೆಗೆ ರಶ್ಮಿಕಾ ಅಭಿನಯಿಸಬೇಕಿತ್ತು. ದರ್ಶನ್ ಅವರ ಹಿಂದಿನ ಚಿತ್ರ ತಾರಕ್‌ನಲ್ಲಿ ರಶ್ಮಿಕಾ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಶ್ಮಿಕಾ ಬದಲು ಬೇರೆ ನಾಯಕಿ ಬಂದಿದ್ದರು. ರಶ್ಮಿಕಾ ಯಾಕೆ ನಟಿಸಲಿಲ್ಲ ಎಂದರೆ, ಅದಕ್ಕೆ ಬೇರೆ ಬೇರೆ ತರಹದ ಕಾರಣಗಳು ಕೇಳಿ ಬಂದವು. ಅದೆಲ್ಲಾ ಆಗಿ ಒಂದು ವರ್ಷವಾಗುವಷ್ಟರಲ್ಲೇ, ದರ್ಶನ್ ಜೊತೆಗೆ ರಶ್ಮಿಕಾ ಅಭಿನಯಿಸುವಂತಾಗಿದೆ. ದರ್ಶನ್ ಅಭಿನಯದ 51ನೇ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತ ಸಹ ಆಗಿದೆ.
ಚಿಕ್ಕ ವಯಸ್ಸಿನಲ್ಲಿ ಯಶಸ್ವಿ ನಟಿಯಾಗಿರುವುದು ಹೇಗನಿಸುತ್ತದೆ ಎಂದರೆ, ತಾನೊಬ್ಬ ದೊಡ್ಡ ನಟಿ ಅಂತ ಅನಿಸುತ್ತಿಲ್ಲ ಎನ್ನುತ್ತಾರೆ ರಶ್ಮಿಕಾ. “ನಾನು ಈಗಿನ್ನೂ ಮೂರು ಚಿತ್ರಗಳಲ್ಲಿ ನಟಿಸಿದ್ದೀನಿ. ನಾನೊಬುÛ ದೊಡ್ಡ ನಟಿ ಅಂತ ಯಾವತ್ತೂ ಅನಿಸಿಲ್ಲ. ಈಗಷ್ಟೇ ಹೆಜ್ಜೆ ಇಡುತ್ತಿದ್ದೀನಿ. ನನಗೆ ಯಾವುದೇ ಮಹತ್ವಾಕಾಂಕ್ಷೆಗಳು ಇಲ್ಲ. ಬರೀ ಸಿನಿಮಾ ಮಾಡಬೇಕು ಅಂತಲೂ ಇಲ್ಲ. ಅಪ್ಪನ ಬಿಝಿನೆಸ್ ಇದೆ. ಒಟ್ಟಾರೆ ಸಕ್ರಿಯವಾಗಿರಬೇಕು ಎನ್ನುವುದು ನನ್ನಾಸೆ’ ಎನ್ನುತ್ತಾರೆ ರಶ್ಮಿಕಾ.
ಎಲ್ಲಾ ಸರಿ, ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ಅವರು ಅಷ್ಟು ಸುಲಭವಾಗಿ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಸದ್ಯಕ್ಕೆ ಇಲ್ಲ, ಡೇಟ್ ಫಿಕ್ಸ್ ಆದರೆ, ಖಂಡಿತ ಹೇಳುತ್ತೇನೆ ಎನ್ನಲು ಮರೆಯುವುದಿಲ್ಲ ರಶ್ಮಿಕಾ.
-ಉದಯವಾಣಿ