ರಾಷ್ಟ್ರೀಯ

ಅಪಮೌಲ್ಯದ ಅವಧಿಯಲ್ಲಿ 15 ಲ. ರೂ. ಠೇವಣಿ ಇಟ್ಟವರಿಗೆ ಸಂಕಷ್ಟ!

Pinterest LinkedIn Tumblr


ಹೊಸದಿಲ್ಲಿ: ನೋಟು ಅಪಮೌಲ್ಯದ ಅವಧಿಯಲ್ಲಿ 15 ಲಕ್ಷ ರೂ. ಗಳಿಗಿಂತ ಹೆಚ್ಚು ಮೊತ್ತವನ್ನು ಖಾತೆಯಲ್ಲಿ ಠೇವಣಿ ಯಿಟ್ಟವರಿಗೆ ಸಂಕಷ್ಟ ಎದುರಾಗಿದೆ. ಅಷ್ಟೊಂದು ಮೊತ್ತ ಹೇಗೆ ಬಂತು ಎಂಬ ವಿವರವನ್ನೂ ನೀಡದೇ ರಿಟರ್ನ್ಸ್ ಅನ್ನೂ ಸಲ್ಲಿಸದೇ ಇದ್ದ ಸುಮಾರು 1.98 ಲಕ್ಷ ಖಾತೆದಾರರು ಕಾನೂನಿನ ಅನ್ವಯ ಕಠಿನ ಕ್ರಮ ಎದುರಿಸಬೇಕಾಗುತ್ತದೆ.

ಸಂಶಯಾಸ್ಪದ ಖಾತೆಗಳನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆಯು ಕಳೆದ ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ ಖಾತೆದಾರರಿಗೆ 2 ಲಕ್ಷದಷ್ಟು ನೋಟಿಸ್‌ಗಳನ್ನು ಜಾರಿ ಮಾಡಿದೆ. ಆದರೆ, ಯಾರೂ ಅದಕ್ಕೆ ಉತ್ತರ ನೀಡಿಲ್ಲ. ಹೀಗಾಗಿ, ಅಂಥವರ ವಿರುದ್ಧ ಕಾನೂನು ಪ್ರಕಾರ ಕಠಿನ ಕ್ರಮ ಅಥವಾ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್‌ ಚಂದ್ರ ಹೇಳಿದ್ದಾರೆ.

ದೇಶಾದ್ಯಂತ ಕಳೆದ 3 ತಿಂಗಳಲ್ಲಿ ಸುಮಾರು 3 ಸಾವಿರ ಪ್ರಕರಣಗಳು ದಾಖಲಾಗಿವೆ ಎಂದೂ ತಿಳಿಸಿದ್ದಾರೆ.

-ಉದಯವಾಣಿ

Comments are closed.