ಮನೋರಂಜನೆ

‘ಬಿಗ್ ಬಾಸ್’ ದಿವಾಕರ್ ಬಗ್ಗೆ ಲೀಕ್ ಆದ ಸಂಗತಿ ! ಈ ವಿಷಯ ಮುಚ್ಚಿಟ್ಟಿದ್ದು ಏಕೆ ?

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಕನ್ನಡ-5 ಸೀಸನಿನನಲ್ಲಿ ಸೇಲ್ಸ್ ಮ್ಯಾನ್ ಎಂದು ಹೇಳಿಕೊಂಡು ಬಂದು ಎಲ್ಲರ ಅನುಕಂಪಕ್ಕೆ ಈಡಾಗಿ ರನ್ನರ್ ಅಪ್ ಆಗಿರುವ ದಿವಾಕರ್ ಬಗ್ಗೆ ಒಂದು ದೊಡ್ಡ ವಿಷಯ ಹೊರಬಿದ್ದಿದೆ.

ತಾನು ಆರ್ಯುವೇದ ತೈಲ ಮಾರಾಟ ಮಾಡುತ್ತಿದ್ದ ಓರ್ವ ಸಾಮಾನ್ಯ ವ್ಯಕ್ತಿ, ತಾನು ಯಾವುದೇ ಹಿನ್ನೆಲೆಯಿಂದ ಬಂದವನಲ್ಲ…ಕೂಲಿನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೆ ಎಂದು ಹೇಳುತ್ತಾ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದ ದಿವಾಕರ್ ವೀಕ್ಷಕರ ಅನುಕಂಪಕ್ಕೆ ಒಳಗಾಗಿ ಎಷ್ಟೇ ಬಾರಿ ನಾಮಿನೇಟ್ ಆದರೂ ಸೇಫ್ ಆಗುತ್ತಿದ್ದರು.

ಊರೂರು ತಿರುಗಿ ಆರ್ಯುವೇದ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್ ಗೆ ಈ ಮಟ್ಟದ ಜನಪ್ರಿಯತೆ, ಖ್ಯಾತಿ ತಂದುಕೊಟ್ಟಿದ್ದು ‘ಬಿಗ್ ಬಾಸ್’ ಕಾರ್ಯಕ್ರಮ.

ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಎಂಬ ಸಂಗತಿ ಎಲ್ಲರಿಗೂ ಗೊತ್ತು.ಆದರೆ ಈಗ ದಿವಾಕರ್ ಓರ್ವ ನಟ ಕೂಡ ಎಂಬ ಸಂಗತಿ ಲೀಕ್ ಆಗಿದೆ.

ಸಿನಿಮಾ ಒಂದರಲ್ಲಿ ದಿವಾಕರ್ ಕಾಣಿಸಿಕೊಂಡಿರುವ ಫೋಟೋ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಹಂಚಿಕೆಯಾಗುತ್ತಿದೆ.

ಸಿನಿಮಾ ಒಂದರಲ್ಲಿ ವಿಲನ್ ಗಳ ಗುಂಪಿನಲ್ಲಿ ದಿವಾಕರ್ ಕಾಣಿಸಿಕೊಂಡಿರುವ ಸ್ಕ್ರೀನ್ ಶಾಟ್ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಸ್ಕ್ರೀನ್ ಶಾಟ್ ನೋಡಿದರೆ ಇದು ‘ಉಗ್ರಂ’ ಸಿನಿಮಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ, ‘ಉಗ್ರಂ’ ಚಿತ್ರವನ್ನ ದುರ್ಬೀನು ಹಾಕೊಂಡು ಹುಡುಕಿದ್ರೂ, ಕೆಲವರಿಗೆ ದಿವಾಕರ್ ಕಾಣುತ್ತಿಲ್ಲ. ಹೀಗಾಗಿ, ಈ ಫೋಟೋ ರಿಯಲ್ಲೋ.? ಫೋಟೋಶಾಪೋ.? ಅಥವಾ ಬೇರೆ ಚಿತ್ರದ್ದೋ.? ಅಂತ ಕ್ಲಾರಿಟಿ ಸಿಗುತ್ತಿಲ್ಲ.

ತಾನು ಸೇಲ್ಸ್ ಮ್ಯಾನ್ ಎಂದು ಹೇಳುತ್ತಿದ್ದ ದಿವಾಕರ್ ತಮಿಳು ಕಿರುಚಿತ್ರದಲ್ಲಿ ನಟನಾಗಿ ನಟಿಸಿದ್ದನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲಿ ಕೂಡ ಹೇಳಿಕೊಂಡಿಲ್ಲ. ಆದರೆ ದಿವಾಕರ್ ನಟಿಸಿರುವ ಕಿರುಚಿತ್ರ ಈಗಲೂ youtube ನಲ್ಲಿದೆ.

ಈಗ ಲೀಕ್ ಆಗಿರುವ ಫೋಟೋ ನೋಡಿದರೆ ಜ್ಯೂನಿಯರ್ ಆರ್ಟಿಸ್ಟ್ ಆಗಿ ವಿಲನ್ ಸೈಡಲ್ಲಿ ನಿಲ್ಲುವ ಪಾತ್ರ ನಿರ್ವಹಿಸಿದ್ರಾ ದಿವಾಕರ್.? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ತಾನು ವಿಷ್ಣುವರ್ಧನ್ ಫ್ಯಾನ್” ಅಂತೆಲ್ಲ ಹೇಳಿಕೊಳ್ತಿದ್ದ ದಿವಾಕರ್, ಕಿರುಚಿತ್ರದಲ್ಲಿ ಅಭಿನಯಿಸಿರುವ ಬಗ್ಗೆ ‘ಬಿಗ್ ಬಾಸ್’ ಮನೆಯಲ್ಲಿ ಯಾವತ್ತೂ ಹೇಳಿಕೊಂಡಿಲ್ಲ.

Comments are closed.