ಮನೋರಂಜನೆ

ಬಿಗ್‌ಬಾಸ್‌’ನಲ್ಲಿ ತನ್ನ ಸ್ನೇಹ, ನೆನಪಿಗಾಗಿ ಚಂದನ್’ಗೆ ನಿವೇದಿತಾ ನೀಡಿದ ಉಡುಗೊರೆ ಏನು..?

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್‌ ಫಿನಾಲೆ ಹಂತಕ್ಕೆ ಬಂದು ನಿಂತಿದ್ದರೂ, ಆರಂಭದಿಂದಲೂ ಈ ಮನೆಯಲ್ಲಿ ಇಬ್ಬರ ಸ್ನೇಹ ಕೊನೆಯ ತನಕ ಕಾಣಲು ಸಿಕ್ಕಿದ್ದು ಚಂದನ್-ನಿವೇದಿತಾಳ.

ಚಂದನ್-ನಿವೇದಿತಾ ಬಿಗ್‌ಬಾಸ್‌ ಆರಂಭದಿಂದ ಕೊನೆಯವರೆಗೆ ನಡೆದುಕೊಂಡ ರೀತಿ, ಇಬರಿಬ್ಬರ ಸ್ನೇಹವನ್ನು ವೀಕ್ಷಕರು ಮೆಚ್ಚಿಕೊಂಡೆ ಬಂದಿದ್ದಾರೆ.

ಇದನ್ನು ಇನ್ನಷ್ಟು ಗಟ್ಟಿಗೊಳಿಸುವಂಥ ಘಟನೆ ಶುಕ್ರವಾರದ ಎಪಿಸೋಡಿನಲ್ಲಿ ನಡೆಯಿತು. ತಮ್ಮ ಸ್ನೇಹ ಇನ್ನಷ್ಟು ಗಟ್ಟಿಗೊಳ್ಳಲು ಚಂದನ್’ಗೆ ಉಡುಗೊರೆ ಒಂದನ್ನು ನಿವೇದಿತಾ ನೀಡಿದಳು.

ಬಿಗ್‌ಬಾಸ್‌ ಮನೆಯಲ್ಲಿರುವ ಹಾಗೂ ಮನೆಯಿಂದ ಹೊರಗೆ ಹೋಗಿರುವ ಸ್ಪರ್ಧಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಯಿತು. ಈ ವೇಳೆ ಮನೆಯಲ್ಲಿರುವ 5 ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈ ವೇಳೆ ಚಂದನ್ ಅವರು ತಮ್ಮ ಹಾಗೂ ನಿವೇದಿತಾ ಅವರ ಸ್ನೇಹದ ಬಗ್ಗೆ ಅನಿಸಿಕೆ ಹಂಚಿಕೊಂಡರು.. ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಸ್ನೇಹಿತರಿದ್ದಾರೆ. ಆದರೆ, ಅತೀ ಹೆಚ್ಚು ಹಚ್ಚಿಕೊಂಡಿದ್ದು ನಿವೇದಿತಾ ಅವರನ್ನು ಎಂದು ಹೇಳಿದರು ಚಂದನ್‌. ಜತೆಗೆ ನನ್ನ ಚಿಂತನೆಗಳು ಅವಳಿಗೆ ಬೇಗನೆ ಅರ್ಥವಾಗುತ್ತವೆ. ಅದಕ್ಕೆ ನಾವು ತುಂಬಾ ಒಳ್ಳೆಯ ಸ್ನೇಹಿತಾರಿದ್ದೇವೆ ಎಂದರು.

ಇದೆಲ್ಲ ಮುಗಿದ ಮೇಲೆ ಗಾರ್ಡ್‌ನ್ ಏರಿಯಾದಲ್ಲಿ ಕುಳಿತಿದ್ದ ಚಂದನ್ ಬಳಿಗೆ ಆಗಮಿಸಿದ ನಿವೇದಿತಾ, ತಮ್ಮ ಕೈ ಬೆರಳಿನಲ್ಲಿದ್ದ ರಿಂಗ್‌ನ್ನು ಚಂದನ್‌ ಅವರಿಗೆ ನೀಡಿ ತಮ್ಮ ಸ್ನೇಹ ಹೀಗೆ ಮುಂದುವರಿಯಲಿ ಎಂದು ಹಾರೈಸಿದಳು. ಇದು ನಿನ್ನೆ ನೆನಪಿಗಾ ಎಂದು ಪ್ರಶ್ನಿಸಿದ ಚಂದನ್ ಉಡುಗೊರೆ ಸ್ವೀಕರಿಸಿದರು.

Comments are closed.