ಮನೋರಂಜನೆ

ಬಿಗ್‌ಬಾಸ್‌‌ ಟ್ರೋಫಿ ಗೆದ್ದು ಸಂಭ್ರಮಿಸಿದ ಜೆಕೆ !

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್ ಕನ್ನಡದ 5 ನೇ ಸೀಸನ್‌’ನ ಫಿನಾಲೆಗೆ ಕೆಲವೇ ಕ್ಷಣ ಬಾಕಿ ಉಳಿದಿದ್ದು, ಎಲ್ಲ ಐವರು ಸ್ಪರ್ಧಿಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದರೆ ಜೆಕೆ ಬಿಗ್‌ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ.

ಹಾ..ಹೌದಾ…! ಇಲ್ಲ ಕಣ್ರೀ….ಇದು ಶುಕ್ರವಾರ ಬಿಗ್‌ಬಾಸ್ ಮನೆಯಲ್ಲಿ ನಡೆದ ಟಾಸ್ಕಿನಲ್ಲಿ ಜೆಕೆ ಬಿಗ್‌ಬಾಸ್ ಟ್ರೋಫಿ ಗೆದ್ದುಕೊಡದ್ದು.

ಫಿನಾಲೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಟ್ರೋಫಿಯ ಮಹತ್ವ ಹಾಗೂ ಅದನ್ನು ಎತ್ತಿ ಹಿಡಿಯುವಲ್ಲಿರುವ ಖುಷಿಯನ್ನು ತಿಳಿಯಪಡಿಸುವ ಉದ್ದೇಶದಿಂದ ಒಂದು ಟಾಸ್ಕ್‌ ನೀಡಿದ್ದರು. ಈ ಟಾಸ್ಕ್‌ ಅನ್ವಯ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಮರದ ಚೌಕಟ್ಟಿನ ಮೇಲೆ ಟ್ರೋಫಿ ಹಿಡಿದುಕೊಂಡು ನಿಲ್ಲಬೇಕಿತ್ತು. ಯಾರು ಹೆಚ್ಚು ಸಮಯದವರೆಗೆ ನಿಲ್ಲುತ್ತಾರೆಯೋ ಅವರು ಈ ಟಾಸ್ಕ್‌ನಲ್ಲಿ ವಿನ್ ಆಗಲಿದ್ದಾರೆ ಎಂದು ಸೂಚಿಸಲಾಗಿತ್ತು.

ಫಿನಾಲೆಗೆ ತಲುಪಿರುವ ಜೆಕೆ, ಚಂದನ್, ದಿವಾಕರ್, ಶ್ರುತಿ ಹಾಗು ನಿವೇದಿತಾ ಬಿಗ್‌ಬಾಸ್ ಟ್ರೋಫಿಯೊಂದಿಗೆ ಮರದ ತುಂಡಿನ ಮೇಲೆ ನಿಂತರು. ಆದರೆ, ಯಾರಿಗೂ ಕೂಡ ಹೆಚ್ಚು ಸಮಯ ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಮೊದಲಿಗೆ ದಿವಾಕರ್ ಕೆಳಗೆ ಇಳಿದ್ರು. ಬಳಿಕ ನಿವೇದಿತಾ ಹಾಗೂ ಶೃತಿ ಸೋಲನ್ನೊಪ್ಪಿಕೊಂಡ್ರು. ಕೊನೆಯದಾಗಿ ಜೆಕೆ ಹಾಗೂ ಚಂದನ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಳಿಕ ಚಂದನ್ ಕೂಡ ಸೋಲಬೇಕಾಯಿತು.

ಈ ಟಾಸ್ಕ್‌ನಲ್ಲಿ ವಿನ್ ಆದ ಜೆಕ ಬಿಗ್‌ಬಾಸ್‌ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ಜೆಕೆಗೆ ಫಿನಾಲೆಯಲ್ಲಿ ವಿನ್ ಆದಷ್ಟು ಖುಷಿಯಾಯಿತು.

Comments are closed.