
ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಸೆಲೆಬ್ರಿಟಿ-ಕಾಮನ್ ಮ್ಯಾನ್’ಗಳ ಮಧ್ಯೆ ಗಲಾಟೆ-ತಿಕ್ಕಾಟ-ಕೂಗಾಟ ನಡೆದದ್ದನ್ನೆಲ್ಲ ಜನ ನೋಡಿದ್ದಾರೆ. ಬಿಗ್ಬಾಸ್ ಮನೆಯೊಳಗೆ ನಾವು ಯಾವುದೇ ರೀತಿಯ ತಾರತಮ್ಯ ಮಾಡುತ್ತಿಲ್ಲ ಎಂದು ಹೇಳುತ್ತಲೇ ಕಾಮನ್ ಮ್ಯಾನ್ಗಳನ್ನು ದೂರ ಇಡುತ್ತಿದ್ದ ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆಯೂ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್’ಗಳನ್ನೂ ಸದಾ ದೂರ ಇಟ್ಟೆ ಗುಂಪುಗಾರಿಕೆ ಮಾಡುತ್ತಿದ್ದ ಸೆಲೆಬ್ರಿಟಿಗಳು ಮನೆಯಿಂದ ಹೊರಬಂದ ಮೇಲೆಯೂ ತಮ್ಮ ಬುದ್ದಿಯನ್ನು ಬಿಟ್ಟಂತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ಹರಿದಾಡುತ್ತಿವೆ.
ಸೆಲೆಬ್ರಿಟಿ ಸ್ಪರ್ಧಿಗಳಾದ ಅನುಪಮಾ ಗೌಡ, ಜಗನ್ನಾಥ್ ಚಂದ್ರಶೇಖರ್, ಆಶಿತಾ ಚಂದ್ರಪ್ಪ, ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್, ಕೃಷಿ ತಾಪಂಡ ಮತ್ತು ತೇಜಸ್ವಿನಿ ಗೆಟ್ ಟು ಗೆದರ್ ಒಂದರಲ್ಲಿ ಭಾಗವಹಿಸಿದ ಫೋಟೋ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಈ ಪಾರ್ಟಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿರುವ ಯಾವುದೇ ಕಾಮನ್ ಮ್ಯಾನ್ ಭಾಗವಹಿಸಿದಂತಿಲ್ಲ.
ಇದು ಜನ ಸಾಮಾನ್ಯರ ಆಕ್ರೋಶಕ್ಕೂ ಕಾರಣವಾಗಿದೆ. ಒಬ್ಬನೇ ಒಬ್ಬ ಕಾಮನ್ ಮ್ಯಾನ್’ಗಳನ್ನೂ ಕರೆಯದೆ ಸೆಲೆಬ್ರಿಟಿಗಳು ಒಟ್ಟುಸೇರಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಜನರು ಕಿಡಿಕಾರಿದ್ದಾರೆ.
Comments are closed.