ಮನೋರಂಜನೆ

ಬಿಗ್‌ಬಾಸ್‌ ಗೆಲ್ಲಲು ಜೆಕೆ ಅರ್ಹರಂತೆ ! ಚಂದನ್ ಹೇಳಿದ್ದೇಕೆ..?

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್‌’ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದ ಮಧ್ಯೆ ನೀಡಲಾದ ಟಾಸ್ಕ್ ಒಂದು ಎಲ್ಲರ ಗಮನ ಸೆಳೆಯಿತು.

ಬಿಗ್‌ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬಂದಿದ್ದು, ಕೆಲವೇ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಯಾರೆಲ್ಲ ಈ ಬಾರಿ ಮೊದಲ, ಎರಡನೇ, ಮೂರನೇ, ನಾಲ್ಕನೇ, ಐದನೇ ಸ್ಥಾನದಲ್ಲಿರುಬೇಕೆಂದು ಬಯಸುತ್ತೀರಿ ಎಂಬುದನ್ನು ತಿಳಿಸುವಂತೆ ಟಾಸ್ಕೊಂದನ್ನು ನೀಡಿತ್ತು ಬಿಗ್‌ಬಾಸ್‌.

ಒಂದೆಡೆ ತನ್ನ ತಂದೆಗೆ ಮನೆ ಕಟ್ಟಿಸಿಕೊಡಬೇಕೆಂಬ ಕನಸು ನನಸಾಗಲು ತಾನು ಬಿಗ್‌ಬಾಸ್‌ ಗೆಲ್ಲಬೇಕು ಎಂದು ಹೇಳುತ್ತಿರುವ ಚಂದನ್, ತಾನು ಎರಡನೇ ಸ್ಥಾನದಲ್ಲಿರಲು ಬಯಸಿ, ಜೆಕೆಗೆ ಒಂದನೇ ಸ್ಥಾನ ನೀಡಿದರು.

ಇನ್ನೊಂದೆಡೆ ಜೆಕೆ ತಾನು ಎರಡನೇ ಸ್ಥಾನದಲ್ಲಿರಲು ಬಯಸಿ, ಮೊದಲ ಸ್ಥಾನವನ್ನು ಚಂದನ್’ಗೆ ನೀಡಿದರು.

ಮೊದಲಿಗೆ ತಮ್ಮ ಅಭಿಪ್ರಾಯ ತಿಳಿಸಿದ ಜೆಕೆ, ಪ್ರಥಮ ಸ್ಥಾನದಲ್ಲಿ ಚಂದನ್, ಎರಡನೇ ಸ್ಥಾನದಲ್ಲಿ ತಾವು ಇರುವುದಾಗಿ ಹೇಳಿದ್ರು. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಅವರು, ಚಂದನ್ ಮೊದಲ ಸ್ಥಾನದಲ್ಲಿರುವ ಅರ್ಹ. ಆತನಲ್ಲಿರುವ ಟಾಲೆಂಟ್ ಇದಕ್ಕೆ ಕಾರಣ. ಆತನಿಗೆ ಇರುವಷ್ಟು ಬುದ್ಧಿವಂತಿಕೆ ನನ್ನ ಹತ್ತಿರವಿಲ್ಲ. ಟಾಸ್ಕ್ ಸೇರಿದಂತೆ ಎಲ್ಲದರಲ್ಲೂ ಆತನನ್ನು ಮೀರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಮೊದಲ ಸ್ಥಾನದಲ್ಲಿ ಇರಲು ಸೂಕ್ತ ವ್ಯಕ್ತಿ ಎಂದರು. ಇದರ ಜತೆಗೆ ಮೂರನೇ ಸ್ಥಾನವನ್ನು ದಿವಾಕರ್‌, ನಾಲ್ಕನೇ ಸ್ಥಾನ ಶೃತಿ ಹಾಗೂ 5 ನೇ ಸ್ಥಾನವನ್ನು ನಿವೇದಿತಾ ಅವರಿಗೆ ನೀಡಿ, ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ರು ಜೆಕೆ.

ಇನ್ನು ಎಲ್ಲರೂ ಇದೇ ರೀತಿ ತಮ್ಮ ಅಭಿಪ್ರಾಯ ಹಂಚಿಕೊಂಡ್ರು. ಚಂದನ್ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡ್ರು. ಈ ವೇಳೆ ಚಂದನ್‌ ಅವರು ಮೊದಲ ಸ್ಥಾನವನ್ನು ಜೆಕೆ ಅವರಿಗೆ ನೀಡಿದ್ರು. ಆದರೆ, ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಜೆಕೆ, ನೀವೇ ಮೊದಲ ಸ್ಥಾನದಲ್ಲಿರಲು ಅರ್ಹ ವ್ಯಕ್ತಿ. ನಾನು ಈಗಾಗಲೇ ಅದನ್ನು ಹೇಳಿದ್ದೇನೆ. ನಿಮ್ಮಷ್ಟು ಟ್ಯಾಲೆಂಟ್ ನನಗಿಲ್ಲ. ನಿಮ್ಮಿಂದ ಎಲ್ಲರಿಗೂ ಒಳ್ಳೆಯ ಎಂಟರ್‌ಟೈನ್‌ಮೆಂಟ್ ಸಿಕ್ಕಿದೆ ಎಂದರು. ಜೆಕೆ ಮಾತನ್ನು ಒಪ್ಪಿಕೊಳ್ಳದ ಚಂದನ್, ನನ್ನ ಪ್ರಕಾರ ನೀವು ಮೊದಲ ಸ್ಥಾನದಲ್ಲಿರುತ್ತಿರಾ. ಇದನ್ನು ನೀವು ಒಪ್ಪಿಕೊಳ್ಳಲೇಬೇಕು ಎಂದರು.

Comments are closed.