
ಹೊಸದಿಲ್ಲಿ: ಶೀರ್ಷಿಕೆ ಓದಿದಾಕ್ಷಣ ನಿಮ್ಮ ಕಣ್ಣ ರೆಪ್ಪೆ ಬಡಿಯುವುದು ಕೆಲ ಕ್ಷಣ ನಿಂತುಹೋಗಬಹುದು; ಹೃದಯ ಬಡಿತ ಜಾಸ್ತಿಯಾಗಬಹುದು; ಆದರೆ ಗಾಬರಿಯಾಗಬೇಡಿ; ಈ ಶೀರ್ಷಿಕೆಯ ಹಿನ್ನೆಲೆ ಏನೆಂಬುದನ್ನು ಮೊದಲು ತಿಳಿಯೋಣ !
ರಯೀಸ್ ಚಿತ್ರದ ತಾರೆ ಶಾರುಖ್ ಖಾನ್ ನಿಮಗೆಲ್ಲ ತಿಳಿದಿರುವ ಹಾಗೆ ಪ್ರಕೃತ “ಟೆಡ್ ಟಾಕ್ಸ್ ಇಂಡಿಯಾ ನಯೀ ಸೋಚ್’ ಎಂಬ ಟಿವಿ ಶೋ ನಡೆಸಿಕೊಡುತ್ತಿದ್ದಾರೆ. ಈಚೆಗೆ ಇದರ ಒಂದು ಎಪಿಸೋಡ್ನ ಶೂಟಿಂಗ್ನಲ್ಲಿ ಶಾರುಖ್ ಹಲವು ಟೇಕ್ಗಳನ್ನು ತೆಗೆದುಕೊಂಡರೂ ಆ ಸೀನ್ ಕಂಪ್ಲೀಟ್ ಮಾಡಲಾಗಲಿಲ್ಲ. ಅದಕ್ಕೆ ಕಾರಣ ಶಾರುಖ್ ಅವರ ಡಯಲಾಗ್ನಲ್ಲಿದ್ದ ಕ್ವಿಷ್ಟಕರ ಪದ – ಅದುವೇ “ಆಕಾಂಕ್ಷಾ’ !
ಆಕಾಂಕ್ಷಾ ಪದವನ್ನು ಎಷ್ಟು ಬಾರಿ ಯತ್ನಿಸಿದರೂ ಶಾರುಖ್ಗೆ ಅನಾಯಾಸವಾಗಿ ಉಚ್ಚರಿಸಲಾಗಲಿಲ್ಲ. ಅವರು ತುಂಬಾ ತಡವರಿಸಿದರು; ಎಡವಿದರು. ಟೇಕ್ ಮೇಲೆ ಟೇಟ್ ಆಯ್ತು; ಕೊನೆಗೂ ಸರಿ ಹೋಗಲಿಲ್ಲ; ಶಾರುಖ್ ಸುಸ್ತು ಹೊಡೆದರು.
ನನಗೆ ಈ ವರೆಗೆ ಈ ರೀತಿಯ ಅನುಭವ ಆದದ್ದೇ ಇಲ್ಲ. ಎಂಥೆಂಥ ಡಯಲಾಗ್ಗಳನ್ನು ಅನಾಯಾಸವಾಗಿ ಡೆಲಿವರಿ ಮಾಡಿದ್ದೇನೆ; ಆದರೆ ಇಲ್ಲೀಗ ಕೇವಲ ಒಂದು ಪದ “ಆಕಾಂಕ್ಷಾ’ ವನ್ನು ಸರಿಯಾಗಿ ಉಚ್ಚರಿಸಲು ನನ್ನಿಂದಾಗಲಿಲ್ಲ ಎಂದು ಶಾರುಖ್ ಬೇಸರಿಸಿದರು !
ಆದರೂ ಸನ್ನಿವೇಶವನ್ನು ತಿಳಿಗೊಳಿಸುವ ಯತ್ನವಾಗಿ ಶಾರುಖ್ ಘೋಷಿಸಿದರು : “ನನಗನ್ನಿಸುತ್ತೆ, ನಾನು ಬೇಗನೆ ನಾಲ್ಕನೇ ಮಗುವನ್ನು ಹೊಂದಲಿದ್ದೇನೆ ಮತ್ತು ಅದರ ಹೆಸರನ್ನು ಆಕಾಂಕ್ಷಾ ಎಂದು ಇಡಲಿಕ್ಕಿದ್ದೇನೆ’.
ಶಾರುಖ್ ಸಿಡಿಸಿದ ಈ ಜೋಕಿಗೆ ಎಲ್ಲರ ನಕ್ಕರಾದರೂ “ಶಾರುಖ್ ಗೆ ನಿಜಕ್ಕೂ 4ನೇ ಮಗು ಹುಟ್ಟಲಿಕ್ಕಿದೆಯಾ’ ಎಂಬ ಯಕ್ಷಪ್ರಶ್ನೆ ಅವರೆಲ್ಲರನ್ನೂ ಕಾಡ ತೊಡಗಿತು !
ಶಾರುಖ್ ಪ್ರಕೃತ ಆನಂದ್ ಎಲ್ ರಾಯ್ ಅವರ “ಝೀರೋ’ ಎಂಬ ಹೊಸ ಚಿತ್ರದಲ್ಲಿ ಕುಬjನಾಗಿ ನಟಿಸುತ್ತಿದ್ದಾರೆ. ಇದರ ಟ್ರೇಲರ್ ಬಿಡುಗಡೆಯನ್ನೇ ಅವರ ಲಕ್ಷಾಂತರ ಸಾಮಾಜಿಕ ಮಾಧ್ಯಮಗಳ ಹಿಂಬಾಲಕರು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
-ಉದಯವಾಣಿ
Comments are closed.