ಮನೋರಂಜನೆ

ಬಾರ್ಬಿ ಡಾಲ್‌ ನಿವೇದಿತಾಗೆ ಕೈಮುಗಿದ ‘ಹೆಬ್ಬುಲಿ’!

Pinterest LinkedIn Tumblr


ಶನಿವಾರ ಬಂತು ಅಂದ್ರೆ ಕಿಚ್ಚನ ವಾರದ ಕಥೆಗಾಗಿ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಎಂದಿನಂತೆ ಶನಿವಾರದ ಕಿಚ್ಚನ ಪಂಚಾಯ್ತಿ ಪ್ರೇಕ್ಷಕರಿಗೆ ತುಂಬಾ ಮಜಾ ನೀಡಿದ್ದು ಸುಳ್ಳಲ್ಲ. ವಾರಪೂರ್ತಿ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಘಟನೆಗಳ ಮೇಲೆ ಬೆಳಕು ಚೆಲ್ಲಿದ ಕಿಚ್ಚ, ನಿವೇದಿತಾ ಗೌಡ ಅವರಿಗೆ ಕೈಮುಗಿದು ಮೆಚ್ಚುಗೆಯ ಮಾತುಗಳನ್ನಾಡಿದರು. ಅಷ್ಟಕ್ಕೂ ನಿವೇದಿತಾಗೆ ಕಿಚ್ಚ ಕೈಮುಗಿಯಲು ಕಾರಣ ಏನು ಗೊತ್ತಾ? ಹಾಗಾದ್ರೆ ಮುಂದೆ ಓದಿ.

ಈ ವಾರ ಬಿಗ್‌ಬಾಸ್‌ ಸ್ಪರ್ಧಿಗಳ ಮನೆಯವರು ಬಿಗ್‌ ಮನೆಗೆ ಬಂದು, ತಮ್ಮವರನ್ನು ಭೇಟಿಯಾಗಿ, ಅವರಲ್ಲಿ ಧೈರ್ಯ ತುಂಬಿ ಹೋದರು. ಬಿಗ್‌ಬಾಸ್‌ ಸ್ಫರ್ಧಿಗಳಿಗೆ ಇದೊಂದು ರೀತಿಯಲ್ಲಿ ಮರೆಯಲಾಗದ ಅನುಭವ. ದಿವಾಕರ್‌ ಅವರನ್ನು ಭೇಟಿಯಾಗಲು ಪತ್ನಿ ಮಮತಾ ಬಿಗ್‌ ಮನೆಗೆ ಬಂದಾಗ, ನಿವೇದಿತಾ ಪಟ್ಟ ಶ್ರಮವನ್ನು ಕಿಚ್ಚ ಸುದೀಪ್‌ ತುಂಬು ಮನದಿಂದ ಶ್ಲಾಘಿಸಿದರು.

ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಅನ್ವಯ ಏತದ ಒಂದು ಕಡೆ ಕಾಲಿಟ್ಟು ಮತ್ತೊಂದು ಕಡೆ ಇದ್ದ ಮಣ್ಣಿನ ಮಡಿಕೆಯನ್ನು ಕಾಪಾಡಿಕೊಳ್ಳಬೇಕಿತ್ತು. ಮಣ್ಣಿನ ಮಡಿಕೆ ಎಷ್ಟು ಹೊತ್ತು ಸುರಕ್ಷಿತವಾಗಿರುತ್ತದೆಯೋ ಅದರ ಮೇಲೆ ಮನೆಗೆ ಭೇಟಿಯಾಗಲು ಬಂದವರ ಇರುವಿಕೆಯ ಕಾಲ ನಿರ್ಧಾರವಾಗುತ್ತಿತ್ತು. ದಿವಾಕರ್‌ ಪತ್ನಿ ಮನೆಗೆ ಬಂದ ಸಂದರ್ಭದಲ್ಲಿ ಮಣ್ಣಿನ ಮಡಿಕೆ ಕಾಪಾಡುವ ಜವಾಬ್ದಾರಿ ನಿವೇದಿತಾ ಹೆಗಲೇರಿತು. ಬರೋಬ್ಬರಿ 30 ನಿಮಿಷಗಳ ಕಾಲ ಮಡಿಕೆಯನ್ನು ಕಾಪಾಡಿ, ತಮಗೆ ನೀಡಲಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು ಬಾರ್ಬೀ ಡಾಲ್‌.

ಇದೇ ಕಾರಣಕ್ಕೆ ನಿವೇದಿತಾ ಅವರಿಗೆ ಕೈಮುಗಿದ ಕಿಚ್ಚ ಸುದೀಪ್‌, ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದರು. ಅದೇ ರೀತಿ ಶನಿವಾರದ ಎಪಿಸೋಡ್‌ನಲ್ಲಿ ರಿಯಾಜ್‌ ಬಿಗ್‌ ಮನೆಯಿಂದ ಎಲಿಮಿನೇಟ್‌ ಆದರು.

Comments are closed.