ಅಂತರಾಷ್ಟ್ರೀಯ

ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್ ಪ್ಯಾರಿಸ್ ಫ್ಲ್ಯಾಟ್ ನಿಂದ ಕಿಕ್ ಔಟ್!

Pinterest LinkedIn Tumblr


ಪ್ಯಾರಿಸ್: ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರನ್ನು ಫ್ರಾನ್ಸ್ ಕೋರ್ಟ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಿಂದ ಹೊರಹಾಕುವಂತೆ ಆದೇಶ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮಲ್ಲಿಕಾ ಶೆರಾವತ್ ಹಾಗೂ ಆಕೆಯ ಫ್ರೆಂಚ್ ಮೂಲದ ಪತಿ ಸಿರಿಲ್ ಅವರು 78,787 ಯುರೋಸ್(ಅಂದಾಜು 94,000 ಡಾಲರ್) ಬಾಡಿಗೆ ಪಾವತಿ ಮಾಡದೆ ವಂಚಿಸಿರುವುದಾಗಿ ಅಪಾರ್ಟ್ ಮೆಂಟ್ ಮಾಲೀಕ ದೂರು ನೀಡಿದ್ದರು.

ಶೆರಾವತ್ ದಂಪತಿ 2017ರ ಜನವರಿ 1ರಿಂದ ತಿಂಗಳಿಗೆ 6,054 ಯುರೋ ಬಾಡಿಗೆ ನೀಡುವ ಕರಾರಿನ ಮೇಲೆ ಫ್ಲ್ಯಾಟ್ ನಲ್ಲಿ ವಾಸಿಸಲು ಆರಂಭಿಸಿದ್ದರು. ಆದರೆ ಶೆರಾವತ್ ದಂಪತಿ ಈವರೆಗೂ ಬಾಡಿಗೆ ಪಾವತಿಸಿಲ್ಲ, ಕೇವಲ 2,715 ಯುರೋಸ್ ಹಣ ನೀಡಿರುವುದಾಗಿ ಮಾಲೀಕ ತಿಳಿಸಿರುವುದಾಗಿ ವರದಿ ವಿವರಿಸಿದೆ.

ನವೆಂಬರ್ 14ರಂದು ಪ್ರಕರಣದ ವಿಚಾರಣೆ ಪ್ಯಾರಿಸ್ ಕೋರ್ಟ್ ನಲ್ಲಿ ನಡೆದಿತ್ತು. ಶೆರಾವತ್ ಪರ ವಕೀಲರು, ತಮ್ಮ ಕಕ್ಷಿದಾರರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದರು ಎಂದು ವರದಿ ಹೇಳಿದೆ.

-ಉದಯವಾಣಿ

Comments are closed.