ಮನೋರಂಜನೆ

ಪದ್ಮಾವತ್‌ ಜನವರಿ 25ಕ್ಕೆ ಬಿಡುಗಡೆ

Pinterest LinkedIn Tumblr


ವಿವಾದಗಳ ಕೇಂದ್ರ ಬಿಂದುವಾಗಿದ್ದ ಸಂಜಯ್‌ ಲೀಲಾ ಬನ್ಸಾಲಿ ನಿರ್ಮಾಣದ ಐತಿಹಾಸಿಕ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಸಿಬಿಎಫ್‌ಸಿ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಿದ್ದು, ಜನವರಿ 25ಕ್ಕೆ ಬಿಡುಗಡೆಯಾಗಲಿದೆ.

‘ಪದ್ಮಾವತ್‌’ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹೀದ್‌ ಕಪೂರ್‌, ರಣವೀರ್‌ ಸಿಂಗ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

190 ಕೋಟಿ ಬಜೆಟ್‌ನ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಆ ಸಮಯದಲ್ಲಿ ಬಿಡುಗಡೆಯಾಗಬೇಕಾಗಿದ್ದ ಮನೋಜ್‌ ಪಾಂಡೆ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಅಭಿನಯದ ಚಿತ್ರವನ್ನು ಮುಂದೂಡಲಾಗಿದೆ.

ಜನವರಿ 25ರಂದೇ ಅಕ್ಷಯ್‌ ಕುಮಾರ್ ಅಭಿನಯದ ಸಾಮಾಜಿಕ ಚಿತ್ರ ಪ್ಯಾಡ್‌ ಮ್ಯಾನ್‌ ಕೂಡ ಬಿಡುಗಡೆಯಾಗಲಿದೆ. ಈ ಎರಡು ಸ್ಟಾರ್ ನಟರ ಚಿತ್ರಗಳ ನಡುವೆ ಬಾಕ್ಸ್‌ ಆಫೀಸ್ ವಾರ್‌ ನಡೆಯಲಿದೆ.

Comments are closed.