ರಾಷ್ಟ್ರೀಯ

ಅತ್ಯಾಚಾರದ ವಿಡಿಯೋ ಮಾಡಿ 1 ವರ್ಷ ನಿರಂತರ ರೇಪ್!

Pinterest LinkedIn Tumblr


ಲಕ್ನೋ: ಯುವತಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಬ್ಲಾಕ್‍ಮೇಲ್ ಮಾಡಿ ಒಂದು ವರ್ಷ ಅತ್ಯಾಚಾರಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ಆರೋಪಿ ವಿರುದ್ಧ ದೂರು ನೀಡಿದ್ದು, ಆರೋಪಿ ಅತ್ಯಾಚಾರವೆಸಗಿದ್ದನ್ನು ವಿಡಿಯೋ ಮಾಡಿಕೊಂಡಿದ್ದನು. ಬಳಿಕ ಅದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನಿರಂತರವಾಗಿ ಒಂದು ವರ್ಷದ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋ ಇಟ್ಟುಕೊಂಡು ಹೆದರಿಸಿ ಒಂದು ವರ್ಷದವರೆಗೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈಗ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಆರೋಪಿ ಆಕೆಯನ್ನು ಮದುವೆಯಾಗಲು ಕೇಳಿದಾಗ ಆತ ನಿರಾಕರಿಸಿದ್ದಾನೆ. ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ವಿರುದ್ಧ 367 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣದ ಬೆಳಕಿಗೆ ಬಂದ ತಕ್ಷಣ ಆರೋಪಿ ಹಾಗೂ ಅವರ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ರಾಂಪುರ್ ಎಎಸ್‍ಪಿ ಸುಧಾ ಸಿಂಗ್ ತಿಳಿಸಿದ್ದಾರೆ.

Comments are closed.