ಮನೋರಂಜನೆ

ಆರಾಧ್ಯ ಜತೆ ಬಿಗ್‌ ಬಿ ಸೆಲ್ಫಿ

Pinterest LinkedIn Tumblr


ಮುಂಬಯಿ: ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು ಮೊಮ್ಮಗಳು ಆರಾಧ್ಯ ಜತೆ ಸೆಲ್ಫಿ ತೆಗೆದುಕೊಂಡ ಚಿತ್ರಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡುವ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಅಲ್ಲದೇ ತಮ್ಮ ಬ್ಲಾಗ್‌ನಲ್ಲಿ ನೂತನ ವರ್ಷವನ್ನು ಕುಟುಂಬ ಸದಸ್ಯರ ಜತೆಗೆ ಹೇಗೆ ಆಚರಿಸಿದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಹಿ ಘಟನೆಗಳನ್ನು ಮರೆತು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಪ್ರೀತಿ ಪೂರ್ವಕದಿಂದ ಇರಿ. ಸಾಧನೆಯ ಕನಸು ಹೊತ್ತು ಹೊಸತನದ ಬಗ್ಗೆ ಯೋಚಿಸಿ ಎಂದು ಯುವ ಸಮುದಾಯಕ್ಕೆ ಸಲಹೆ ಕೊಟ್ಟಿದ್ದಾರೆ.

6 ವರ್ಷದ ಮೊಮ್ಮಗಳು ಆರಾಧ್ಯ ತನ್ನ ಅಜ್ಜ ಅಮಿತಾಭ್‌ಗೆ ಪುಟ್ಟ ಕಿರೀಟದಂತಿರುವ ಟಿಯರಾ ಹೇರ್‌ಬ್ಯಾಂಡ್‌ ಹಾಕಿ, ಇಬ್ಬರೂ ಸೆಲ್ಫಿಗೆ ಪೋಸ್‌ಕೊಟ್ಟು ಸಂಭ್ರಮಿಸಿರುವ ಚಿತ್ರವನ್ನು 75ರ ಹರೆಯದ ಬಿಗ್‌ ಬಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Comments are closed.