ಮನೋರಂಜನೆ

ಬಿಗ್‌ಬಾಸ್‌ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ದಿವಾಕರ್-ಜಗನ್ ಜಗಳ

Pinterest LinkedIn Tumblr

ಬಿಗ್‌ಬಾಸ್ ಮನೆಯಲ್ಲಿ ಶುಕ್ರವಾರ ದೊಡ್ಡದೊಂದು ರಾದ್ಧಾಂತವೇ ನಡೆದು ಹೋಯಿತು. ಈ ವಾರ ಬಿಗ್‌ಬಾಸ್ ಮನೆಯಲ್ಲಿ ಜಗಳವನ್ನಾಡುತ್ತಲೇ ಬಂದ ದಿವಾಕರ್ ಹಾಗು ಜಗನ್ ಕೈ ಕೈ ಮಿಲಾಯುಸುವ ಸನ್ನಿವೇಶ ಸೃಷ್ಟಿಯಾಗಿತ್ತು.

ಬಿಗ್‌ಬಾಸ್ ಆರಂಭದಲ್ಲಿ ಜಗಳಕ್ಕಿಳಿದಿದ್ದ ದಿವಾಕರ್ ಅವರನ್ನು ತಿದ್ದಿ ತೀಡಿ ಜೊತೆಯಾಗಿ ನಿಂತು ಸರಿ ದಾರಿಗೆ ತಂದಿದ್ದು ರಿಯಾಜ್. ಅವರೊಂದಿಗೆ ಜಗಳ ಮಾಡಿ ಚಂದನ್ ಜೊತೆ ಗೆಳೆತನ ಬೆಳೆಸಿರುವ ದಿವಾಕರ್, ಶುಕ್ರವಾರ ಬಿಗ್‌ಬಾಸ್ ಮನೆಯಲ್ಲಿ ಜಗನ್ ಜೊತೆ ಜಂಗಿ ಕುಸ್ತಿಗೆ ಇಳಿದೆ ಬಿಟ್ಟರು. ಜಗನ್ ಅವರಿಗೆ ಹೊಡೆಯುವ ರೀತಿಯೇ ಮುನ್ನುಗ್ಗಿದ ದಿವಾಕರ್ ಅವರನ್ನು ಮನೆ ಮಂದಿ ಸಮಾಧಾನಿಸಿದರು.

ಈ ವಾರ ಮಾತ್ರ ದಿವಾಕರ್ ಸಂಪೂರ್ಣವಾಗಿ ಬದಲಾದಂತೆ ವರ್ತಿಸುತ್ತಿದ್ದಾರೆ. ಮಾನವೀಯತೆ ಸಂಬಂಧಗಳಿಗೆ ಬೆಲೆ ಕೊಡದೇ ಸ್ವಾರ್ಥಿಯಂತೆ ನಡೆದುಕೊಳ್ಳುತ್ತಿದ್ದಾನೆ. ಚಿಕ್ಕಪುಟ್ಟ ವಿಷಯಗಳಿಗೂ ಎಲ್ಲರೊಂದಿಗೆ ಜಗಳವಾಡುತ್ತಾನೆ. ಯಾರ ಮಾತು ಕೇಳುವುದಿಲ್ಲ ಎನ್ನುವ ಮಾತುಗಳು ಮನೆಯಲ್ಲಿರುವ ಇತರೆ ಸದಸ್ಯರುಗಳಿಂದ ಕೇಳಿ ಬರುತ್ತಿವೆ. ಇಷ್ಟು ದಿನ ಅಣ್ಣ-ತಮ್ಮಂದಿರಂತಿದ್ದ ರಿಯಾಜ್‌- ದಿವಾಕರ್ ಸಂಬಂಧ ಹಾಳಾಗಿರುವುದಕ್ಕೆ ದಿವಾಕರ್‌ನಲ್ಲಿರುವ ಅಹಂಕಾರವೇ ಕಾರಣ ಎಂದು ಹೇಳಲಾಗುತ್ತಿದೆ.

ನಿನ್ನೆಯೂ ಕೂಡ ಚಿಕ್ಕ ವಿಷಯಕ್ಕೆ ಜಗನ್‌ ಜತೆ ಜಗಳವಾಡಿಕೊಂಡ್ರು ದಿವಾಕರ್‌. ಎಲ್ಲರೂ ಸ್ನಾನ ಮಾಡುವ ಹೊತ್ತಿನಲ್ಲಿ ಬಟ್ಟೆ ತೊಳೆಯುವ ಮೂಲಕ ತಪ್ಪು ಮಾಡಿದ್ದಲ್ಲದೇ, ಅದನ್ನು ಸಮರ್ಥಿಸಿಕೊಂಡು ಜಗಳಕ್ಕೆ ಮುಂದಾದ್ರು ದಿವಾಕರ್. ಇವರ ನಡುವೆ ನಡೆದ ಜಗಳ ಕೈ ಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು. ಒರಟುತನದ ಮಾತುಗಳನ್ನು ಬಿಟ್ಟು ಸೌಜನ್ಯದಿಂದ ವರ್ತಿಸುವಂತೆ ಜಗನ್ ಹಾಗೂ ಸಿಹಿಕಹಿ ಚಂದ್ರು ಅವರ ಮಾತಿಗೂ ಬೆಲೆ ಕೊಡಲಿಲ್ಲ ದಿವಾಕರ್‌. ಈ ವೇಳೆ ಜಗನ್ ಕೂಡ ಆಕ್ರೋಶ ಭರಿತ ಮಾತುಗಳನ್ನಾಡಿದರು.

Comments are closed.