ಮನೋರಂಜನೆ

ಲಕ್ಷ್ಮೀ ರೈ ಬೋಲ್ಡ್ ಸೀನ್ ಲೀಕ್ ಹಿಂದೆ ನಡೆದಿದೆಯಾ ಸಂಚು?!

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳು ಲೀಕ್ ಆಗಿದ್ದು ಇದರ ಹಿಂದೆ ಸಂಚು ನಡೆದಿದೆಯಾ ಎಂಬ ಅನುಮಾನ ಹುಟ್ಟಿಸಿದೆ.

ಜೂಲಿ 2 ರಲ್ಲಿ ಕೆಲವು ಇಂಟಿಮೇಟ್ ದೃಶ್ಯಗಳಿದ್ದು, ಆ ದೃಶ್ಯಗಳನ್ನು ಯಾರೋ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರಂತೆ. ಆದರೆ ನಾನು ಪ್ರಚಾರದಲ್ಲಿ ಬ್ಯುಸಿ ಇದ್ದೇನೆ. ವಿಶೇಷವಾಗಿ ಇಂತಹದ್ದೇ ದೃಶ್ಯಗಳನ್ನು ಯಾರು ಹರಿಯಬಿಟ್ಟಿದ್ದು ಎಂದು ಗೊತ್ತಿಲ್ಲ. ಇದು ನಿಜವಾಗಿ ಅಸಂಬದ್ಧ ಎಂದಿದ್ದಾರೆ ನಾಯಕಿ ಲಕ್ಷ್ಮೀ ರೈ.

ವಿಶೇಷವೆಂದರೆ ಈ ಸಿನಿಮಾ ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ಪೆಹ್ಲಾಜ್ ನಿಹಲಾನಿ ಅರ್ಪಿಸುವ ಚಿತ್ರ. ಪೆಹ್ಲಾಜ್ ತಾವು ಮಂಡಳಿ ಅಧ್ಯಕ್ಷರಾಗಿದ್ದಾಗ ಶಾರುಖ್ ಖಾನ್ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಾಲೋ ಸಿನಿಮಾದ ಚುಂಬನದ ದೃಶ್ಯಕ್ಕೇ ಆಕ್ಷೇಪ ಎತ್ತಿದ ‘ಸಂಸ್ಕಾರವಂತ’ ಅಧ್ಯಕ್ಷ. ಇದೀಗ ಅವರೇ ಅರ್ಪಿಸಿದ ಸಿನಿಮಾದಲ್ಲಿ ಇಷ್ಟೊಂದು ಬೋಲ್ಡ್ ದೃಶ್ಯಗಳಿರುವುದನ್ನು ಬೇಕೆಂದೇ ಯಾರೋ ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಇದು ಪೆಹ್ಲಾಜ್ ವಿರುದ್ಧ ನಡೆದ ಸಂಚು ಎಂದು ಬಣ್ಣಿಸಲಾಗುತ್ತಿದೆ.

Comments are closed.