ಮನೋರಂಜನೆ

ಜಗನ್‌-ಆಶಿತಾ ನಡವಳಿಕೆ-ವರ್ತನೆ ವಿರುದ್ಧ ಆಕ್ರೋಶಗೊಂಡಿರುವ ಬಿಗ್‌ಬಾಸ್‌ ವೀಕ್ಷಕರು ! ಇಬ್ಬರನ್ನು ಹೊರದಬ್ಬಲು ಒತ್ತಾಯ !

Pinterest LinkedIn Tumblr

ಬಿಗ್‌ಬಾಸ್‌ ಮನೆಯಲ್ಲಿ ಈಗ ಲವ್ ಕಹಾನಿ ಜೊತೆ ದೊಡ್ಡ ಮಟ್ಟದ ರಾದ್ಧಾಂತವೇ ನಡೆಯುತ್ತಿದೆ. ಈ ಮೊದಲು ಹೇಳಿರುವ ಹಾಗೆ ಬಿಗ್‌ಬಾಸ್‌ ಮನೆಯಲ್ಲಿ ಎಲೆಮರೆಯ ಕಾಯಿಗಳಂತೆ ಕೆಲವು ಲವ್‌ ಕಹಾನಿಗಳು ಜೀವ ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.

ಅದರಲ್ಲೂ ಮನೆಯಲ್ಲಿರುವ ಜಗನ್‌ ಹಾಗೂ ಆಶಿತಾ ನಡುವಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಖಂಡಿತವಾಗಿಯೂ ಇವರ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್‌ ನಡೆಯುತ್ತಿದೆ ಎನ್ನುವ ಅನುಮಾನ ಬರುತ್ತೆ. ಮನೆಯಲ್ಲಿ ಈ ಜೋಡಿ ಒಟ್ಟಾಗಿಯೇ ತಿರುಗಾಡುತ್ತದೆ. ಗುಟ್ಟಾಗಿ ಮಾತನಾಡಿಕೊಳ್ಳುತ್ತೆ. ಇವರ ಈ ನಡುವಳಿಕೆ ಬಿಗ್‌ಬಾಸ್‌ಗೂ ಕೂಡ ಅನುಮಾನ ಮೂಡಿಸಿದೆ.

ಜಗನ್‌ಗೆ ಏನಾದ್ರೂ ಆದ್ರೆ ಕೂಡಲೇ ಓಡಿ ಬರುತ್ತಾಳೆ ಆಶಿತಾ. ಜಗನ್‌ ಕೂಡ ಇದಕ್ಕೆ ಹೊರತಾಗಿಲ್ಲ. ಕೇವಲ ಮೂರೇ ವಾರದಲ್ಲಿ ಇಷ್ಟೊಂದು ಕ್ಲೋಸ್‌ ಆಗಿರುವ ಇವರ ನಡುವೆ ಸ್ನೇಹಕ್ಕಿಂತ (ಪ್ರೀತಿ) ಮಿಗಿಲಾಗಿದ್ದು ನಡೆಯುತ್ತಿದೆ ಎನ್ನುವ ಮಾತುಗಳು ಮನೆಯ ಹೊರಗೆ ಕೇಳಿ ಬರುತ್ತಿವೆ.

ನಿನ್ನೆ ಜಗನ್‌ ಹಾಗೂ ಸಮೀರ್‌ ಆಚಾರ್ಯ ನಡುವೆ ಟಾಸ್ಕ್‌ ವಿಚಾರವಾಗಿ ಜಗಳ ನಡೆಯಿತು. ಮುಂಗೋಪಿಯಾಗಿರುವ ಜಗನ್‌ ಆಚಾರ್ಯ ಜತೆ ಮುನಿಸಿಕೊಂಡು ದೂರ ಹೋಗಿ ಕುಳಿತ್ರು. ಕೂಡಲೇ ಅಲ್ಲಿಗೆ ಧಾವಿಸಿದ ಆಶಿತಾ, ಜಗನ್‌ಗೆ ಸಮಾಧಾನ ಮಾಡಿದ್ರು. ಜಗನ್‌ ಜತೆ ಸೇರಿ ಸಮೀರ್ ಆಚಾರ್ಯರಿಗೆ ಬೈಯ್ದರು.

ಜೊತೆಗೆ ಜಗನ್ ವರ್ತನೆ ಕೂಡ ಎಲ್ಲರನ್ನು ಕೆರಳುವಂತೆ ಮಾಡುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ರಿಯಾಜ್’ನನ್ನು ಕಂಡರೆ ಜಗನ್ ಮೈ ಮೇಲೆ ಬಿದ್ದವನಂತೆ ಮಾಡುತ್ತಿರುದು ವೀಕ್ಷಕರನ್ನು ರೊಚ್ಚಿಗೆಬ್ಬಿಸಿದೆ. ರಿಯಾಜ್ ಹಾಗು ಆಚಾರ್ಯರ ಮೇಲೆ ಸದಾ ಜಗಳ ಕಾಯುತ್ತಿರುವ ಜಗನ್’ಗೆ ಬೆಂಬಲವಾಗಿ ಸಿಹಿ ಕಹಿ ಚಂದ್ರು, ಆಶಿತಾ, ಅನುಪಮಾ ಸಾಥ್ ನೀಡುತ್ತಿದ್ದು, ಇದು ಬಿಗ್‌ಬಾಸ್‌ ವೀಕ್ಷಕರನ್ನು ಕೆರಳುವಂತೆ ಮಾಡಿದೆ. ಜಗನ್ ಹಾಗು ಅಶಿತಾರ ವರ್ತನೆ ಹಾಗು ನಡವಳಿಕೆಯ ವಿರುದ್ಧ ವೀಕ್ಷಕರು ಆಕ್ರೋಶಗೊಂಡಿದ್ದು, ಇಬ್ಬರನ್ನು ಹೊರಗೆ ಹಾಕಿ ಅಂತ ಒತ್ತಾಯಿಸಿದ್ದಾರೆ.

Comments are closed.