ಮನೋರಂಜನೆ

ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವರ್ಷದ ಊಟ ನೀಡಿದ ಐಶ್ವರ್ಯಾ ರೈ

Pinterest LinkedIn Tumblr


ಮುಂಬಯಿ: ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್‌ ನಟಿ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ತನ್ನ 44ನೇ ಜನ್ಮ ದಿನದ ಸಂದರ್ಭದಲ್ಲಿ ಮಿಡ್ಡೇ ಮೀಲ್‌ ಕಾರ್ಯಕ್ರಮದ ಮೂಲಕ ಸುಮಾರು 1,000ಕ್ಕಿಂತ ಅಧಿಕ ಮಕ್ಕಳಿಗೆ ಒಂದು ವರ್ಷದವರೆಗೆ ಊಟವನ್ನು ನೀಡಲು ಮುಂದಾಗಿದ್ದಾರೆ.

ತನ್ನ ಸೌಂದರ್ಯ ಮತ್ತು ಅಭಿನಯಕ್ಕೆ ಹೆಸರುವಾಸಿಯಾಗಿರುವ ಐಶ್ವರ್ಯಾ ರೈ ಅವರು ಸಾಮಾಜಿಕ ಕಾರ್ಯಕ್ಕೂ ಕೈ ಜೋಡಿಸಿದ್ದಾರೆ. ಅನ್ನ ಆತ್ಮೀಯ ಫೌಂಡೇಶನ್‌ನ ಮಿಡ್ಡೇ ಮಿಲ್‌ ಯೋಜನೆಯು ಮಹಾರಾಷ್ಟ್ರ ದಲ್ಲಿ 2,000ಕ್ಕಿಂತ ಅಧಿಕ ಶಾಲೆಗಳಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದೆ.

2004 ಆರಂಭವಾದ ಅನ್ನಮಿತ್ರ ಸಂಸ್ಥೆಯು ನಿರತರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಈಗ ಐಶ್ವರ್ಯ ರೈ ಅವರು ಈ ಸಂಸ್ಥೆಗೆ ಕೈಜೋಡಿಸಿ ಒಂದು ವರ್ಷಗಳ ಕಾಲ ಮಕ್ಕಳಿಗೆ ಬಿಸಿ ಊಟ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ಸಾವಿರಾರು ಮಕ್ಕಳ ಊಟದ ಖರ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

-ಉದಯವಾಣಿ

Comments are closed.