
ಸುದೀಪ್ ಅಭಿನಯದ ಮೊದಲ ಹಾಲಿವುಡ್ ಚಿತ್ರವಾದ “ರೈಸನ್’ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡವು ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಿದೆ.
“ರೈಸನ್’ ನಿರ್ದೇಶಕ ಎಡ್ಡಿ ಆರ್ಯ ಅಕ್ಟೋಬರ್ 22ಕ್ಕೆ ಬೆಂಗಳೂರಿಗೆ ಬರುತ್ತಾರೆ ಎಂಬ ಸುದ್ದಿಯನ್ನು ಸುದೀಪ್ ಹೇಳಿದ್ದರು. ಅವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಚಿತ್ರದ ಫೋಟೋ ಸೆಷನ್ ನಡೆಯಲಿದೆ ಎಂದು ಸುದೀಪ್ ಹೇಳಿದ್ದರು.
ಅದರಂತೆ ಕಳೆದ ತಿಂಗಳು ಎಡ್ಡಿ ಆರ್ಯ ತಮ್ಮ ತಂಡದವರೊಂದಿಗೆ ಬೆಂಗಳೂರಿಗೆ ಬಂದು ಸುದೀಪ್ ಅವರ ಜೊತೆಗೆ ಚರ್ಚೆ ನಡೆಸಿದ್ದರು. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಫೋಟೋ ಸೆಷನ್ ಸಹ ನಡೆದಿತ್ತು. ಆದರೆ, ಸುದೀಪ್ ಅವರ ಸ್ಟಿಲ್‌ಗಳನ್ನು ಚಿತ್ರತಂಡವು ಬಿಟ್ಟುಕೊಟ್ಟಿರಲಿಲ್ಲ.
ಈಗ ಕೊನೆಗೆ “ರೈಸನ್’ ತಂಡವು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್‌ನಲ್ಲಿ ಸುದೀಪ್ ಅವರನ್ನು ಸಹ ನೋಡಬಹುದು. ಈ ಚಿತ್ರದ ಚಿತ್ರೀಕರಣವು “ದಿ ವಿಲನ್’ ಮುಗಿದ ನಂತರ ಶುರುವಾಗುವ ಸಾಧ್ಯತೆ ಇದೆ.
-ಉದಯವಾಣಿ
Comments are closed.