ಮನೋರಂಜನೆ

ಐಶ್ವರ್ಯಾ ರೈ ಸಿನಿಮಾ ಸೆಟ್‌ನಲ್ಲಿ ಅವಘಡ

Pinterest LinkedIn Tumblr


ಬಾಲಿವುಡ್ ತಾರೆಗಳಾದ ಐಶ್ವರ್ಯಾ ರೈ, ಅನಿಲ್ ಕಪೂರ್, ರಾಜ್ ಕುಮಾರ್ ರಾವ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ‘ಫ್ಯಾನ್ನಿ ಖಾನ್’. ಈ ಚಿತ್ರದ ಶೂಟಿಂಗ್ ಸದ್ಯಕ್ಕೆ ಮುಂಬೈನ ಫ್ಲೋರಾ ಫೌಂಟೈನ್ ಸ್ಥಳದಲ್ಲಿ ನಡೆಯುತ್ತಿದೆ. ಭಾನುವಾರ ಸೆಟ್‌ನಲ್ಲಿ ಅವಘಡವೊಂದು ಸಂಭವಿಸಿದೆ.

ದ್ವಿಚಕ್ರ ವಾಹನವೊಂದು ಸೆಟ್‌ಗೆ ನುಗ್ಗಿ ಬಂದು ಸಹಾಯಕ ನಿರ್ದೇಶಕಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಸೋಮವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

‘ನಿನ್ನೆ (ಭಾನುವಾರ) ಅನಿರೀಕ್ಷಿತವಾಗಿ ಅಪಾಯ ಸಂಭವಿಸಿತು. ನಮ್ಮ ಸಿನಿಮಾದ ಸಹಾಯಕ ನಿರ್ದೇಶಕಿ ಗಾಯಗೊಂಡಿದ್ದಾರೆ. ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ದ್ವಿಚಕ್ರ ವಾಹನ ಸವಾರನೊಬ್ಬ ಆಕೆಯ ಮೇಲೆ ನುಗ್ಗಿ ಬಂದ. ಆಕೆಗೆ ಕೂಡಲೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ದ್ವಿಚಕ್ರ ವಾಹನ ಸವಾರನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ’ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಐಶ್ವರ್ಯಾ ರೈ ಗಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಕರ್‌ಗೆ ನಾಮಿನೇಟ್ ಆದ ಸಿನಿಮಾ ‘ಎವ್ರಿಬಡಿಸ್ ಫೇಮಸ್’ ಚಿತ್ರದ ರೀಮೇಕ್ ಆಗಿರುವ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

Comments are closed.