ಬೆಂಗಳೂರು: ಖ್ಯಾತ ಸ್ಯಾಂಡಲ್ವುಡ್ ನಟ ಲೂಸ್ ಮಾದ ಯೋಗೇಶ್ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ವರಿಸಿದ್ದಾರೆ.
ಈ ಹಿಂದೆ ನಿಶ್ಚಯವಾದಂತೆಯೇ ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್ ಹಾಲ್ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ನಟ ಯೋಗಿ ವಿವಾಹ ಬಂಧನಕ್ಕೆ ಒಳಗಾದರು. ಕುರುಬ ಸಂಪ್ರದಾಯದಂತೆ ಯೋಗಿ ಮದುವೆ ಸಂಪ್ರದಾಯಬದ್ಧವಾಗಿ ನೆರವೇರಿತು ಎನ್ನಲಾಗಿದೆ.
ಮದುವೆ ಸಂದರ್ಭದಲ್ಲಿ ಸಾಹಿತ್ಯ ಮತ್ತು ಯೋಗಿ ಕುಟುಂಬದವರು ಮತ್ತು ಬಂಧು ಮಿತ್ರರು ಮಾತ್ರ ಹಾಜರಿದ್ದರು. ಇನ್ನು ಮದುವೆಗೆ ಚಿತ್ರರಂಗದ ಖ್ಯಾತನಾಮರು ಆಗಮಿಸಿದ್ದರು. ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ನವದಂಪತಿಗಳಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.
ಐಟಿ ಉದ್ಯೋಗಿಯಾಗಿರುವ ಸಾಹಿತ್ಯ ಅವರು ನಟ ಯೋಗೀಶ್ ಅವರ ಬಾಲ್ಯತಿ ಗೆಳತಿಯಾಗಿದ್ದಾರೆ. ಯೋಗಿ ತುಂಬಾ ದಿನಗಳಿಂದಲೇ ಸಾಹಿತ್ಯ ಅವರನ್ನು ಪ್ರೀತಿಸುತ್ತಿದ್ದರಂತೆ. ಸಾಹಿತ್ಯ ಅವರೂ ಕೂಡ ಯೋಗಿಯನ್ನ ಅವರನ್ನು ಪ್ರೀತಿಸುತ್ತಿದ್ದರು. ಬಳಿಕ ಈ ವಿಚಾರವನ್ನು ಪೋಷಕರಿಗೆ ತಿಳಿಸಿ ಕಳೆದ ಜೂನ್ 11ರಂದು ವಿವಾಹ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.