ಗಂಡಾಗಿ ಹುಟ್ಟಿ ಹೆಣ್ಣಾಗುವುದು ಸುಲಭದ ಮಾತಲ್ಲ. ಅದಕ್ಕೆ ದೈಹಿಕ ಮತ್ತು ಮಾನಸಿಕವಾಗಿಯೂ ಸಿದ್ಧರಾಗಿರಬೇಕಾಗುತ್ತದೆ. ಅದರಲ್ಲೂ ಇಂತಹ ವಿಷಯದಲ್ಲಿ ಸಮಾಜವನ್ನು ಎದುರಿಸುವ ಮನೋಬಲ ತುಸು ಹೆಚ್ಚಾಗಿಯೇ ಬೇಕು. ಈ ಒಂದು ಸಾಹಸಕ್ಕೆ ಕೈ ಹಾಕಿ ಗೆದ್ದವರು ಗೌರವ್ ಅರೋರಾ.
ಹೌದು, ಖ್ಯಾತ ಹಿಂದಿ ರಿಯಾಲಿಟಿ ಶೋ ‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 8’ರಲ್ಲಿ ಪುರುಷ ಸ್ಪರ್ಧಿಯಾಗಿ ಕಾಣಿಕೊಂಡಿದ್ದ ಗೌರವ್, ಮತ್ತೊಂದು ರಿಯಾಲಿಟಿ ಶೋನಲ್ಲಿ ಮಹಿಳಾ ಸ್ಫರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ತಮ್ಮ ಹೆಸರನ್ನು ಗೌರಿ ಅರೋರಾ ಎಂದು ಬದಲಾಯಿಸಿಕೊಂಡಿದ್ದಾರೆ ಗೌರವ್.
ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಗೌರವ್‌ಗೆ ಹೆಣ್ಣಾಗುವ ಹಂಬಲವಿತ್ತಂತೆ. ಈ ಕುರಿತು ತನ್ನ ತಂದೆ-ತಾಯಿ ಹಾಗೂ ಕುಟುಂಬಕ್ಕೆ ತಿಳಿಸಿದಾಗ, ಅವರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿತಂತೆ. ಕಳೆದ ವರ್ಷ ಗೌರವ್ ಅವರನ್ನು ಬ್ಯಾಂಕಾಕ್‌ಗೆ ಕರೆದುಕೊಂಡು ಹೋದ ಅವರ ತಂದೆ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಮಾಡಿಸುವ ಮೂಲಕ ಮಗನ ಹಂಬಲಕ್ಕೆ ಆಸರೆಯಾದರು.