ಮನೋರಂಜನೆ

ಚೆನ್ನೈ, ಪೂಣೆ, ದೆಹಲಿ, ಮುಂಬೈನಲ್ಲಿ “ದಯವಿಟ್ಟು ಗಮನಿಸಿ’

Pinterest LinkedIn Tumblr


ಕಳೆದ ವಾರ ಬಿಡುಗಡೆಯಾದ “ದಯವಿಟ್ಟು ಗಮನಿಸಿ’ಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸರಿಯಾದ ಪ್ರದರ್ಶನದ ಅವಕಾಶ ಸಿಗುತ್ತಿಲ್ಲ ಎಂದು ಇತ್ತೀಚೆಗಷ್ಟೇ ನಿರ್ದೇಶಕ ರೋಹಿತ್‌ ಪದಕಿ ಮತ್ತು ನಿರ್ಮಾಪಕ ಕೃಷ್ಣ ಸಾರ್ಥಕ್‌ ಬೇಸರಿಸಿಕೊಂಡಿದ್ದರು. ಇಲ್ಲೇ ಈ ಸಮಸ್ಯೆ ಇರುವಾಗ, ಚಿತ್ರವನ್ನು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಹೌದು, “ದಯವಿಟ್ಟು ಗಮನಿಸಿ’ ಚಿತ್ರ ನಾಳೆ ಚೆನ್ನೈ, ಪೂಣೆ, ದೆಹಲಿ ಮತ್ತು ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಚೆನ್ನೈನ ಮಾಯಾಜಾಲ್‌ ಮಲ್ಟಿಪ್ಲೆಕ್ಸ್‌ (5.15ರ ಆಟ), ಪೂಣೆಯ ಪಿವಿಆರ್‌ – ದಿ ಪೆವಿಲಿಯನ್‌ ಮಾಲ್‌ (1.15ರ ಆಟ), ಇನಾಕ್ಸ್‌ ಅಮಾನೋರಾ (2.20ರ ಆಟ), ಸಿನಿಪೊಲೀಸ್‌ ಸೀಸನ್ಸ್‌ ಮಾಲ್‌ (5.50ರ ಆಟ), ದೆಹಲಿಯ ಪಿವಿಆರ ಲಾಜಿಕ್ಸ್‌ (ನೊಯ್ಡಾ – 7.15ರ ಆಟ), ಪಿವಿಆರ್‌ ಎಂಜಿಎಫ್ (ಗುರುಗ್ರಾಮ್‌ – 3.00ರ ಆಟ) ಹಾಗೂ ಮುಂಬೈನ ಇನಾಕ್ಸ್‌ ಆರ್‌-ಸಿಟಿ (ಘಾಟ್ಕೊàಪರ್‌ – 1.15ರ ಆಟ), ಕಾರ್ನಿವಲ್‌ ಮೂವಿಸ್ಟಾರ್‌ (ಗೊರೆಗಾಂವ್‌ – 10.15ರ ಆಟ) ಮತ್ತು ಕಾರ್ನಿವಾಲ್‌ ಡ್ರೀಮ್ಸ್‌ ಮಾಲ್‌ (ಬಾಂಡುಪ್‌ – 1.15ರ ಆಟ)ನಲ್ಲಿ ಚಿತ್ರ ಪ್ರದರ್ಶನವಾಗಲಿದೆ.

“ದಯವಿಟ್ಟು ಗಮನಿಸಿ’ ಚಿತ್ರವನ್ನು ಹೋಹಿತ್‌ ಪದಕಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತವಿದೆ. ಅರವಿಂದ್‌ ಕ್ಯಾಮೆರಾ ಹಿಡಿದಿದ್ದಾರೆ. ಕೃಷ್ಣ ಸಾರ್ಥಕ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಸಿಷ್ಟ, ರಾಜೇಶ್‌ ನಟರಂಗ, ರಘುಮುಖರ್ಜಿ, ಸಂಯುಕ್ತಾ ಹೊರನಾಡು, ಭಾವನಾರಾವ್‌, ಅವಿನಾಶ್‌ ಶತಮರ್ಷನ್‌, ಸುಕೃತಾ ವಾಗ್ಲೆ, ಪ್ರಕಾಶ್‌ ಬೆಳಡವಾಡಿ, ಪೂರ್ಣಚಂದ್ರ ಮೈಸೂರು ಇತರರು ನಟಿಸಿದ್ದಾರೆ. ಬೆಂಗಳೂರು, ಡೆಲ್ಲಿ, ಲಡಾಕ್‌, ಪಂಜಾಬ್‌, ಚಂಡೀಗಡ, ಕಳಸ, ಚಿಕ್ಕಮಗಳೂರು, ಶ್ರೀನಗರ ಸುತ್ತಮುತ್ತ ಚಿತ್ರೀಕರಣವಾಗಿದೆ.

-ಉದಯವಾಣಿ

Comments are closed.