ಮನೋರಂಜನೆ

ಜನ್ಮದಿನದ ಸಂಭ್ರಮದಲ್ಲಿರುವ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಕೊಟ್ಟ ಗಿಫ್ಟ್‌ ಏನು?

Pinterest LinkedIn Tumblr

ಮುಂಬೈ: ಮಿರ್ಚಿ, ಬಾಹುಬಲಿ ಚಿತ್ರದ ಜೋಡಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬಗ್ಗೆ ಒಂದಿಲ್ಲೊಂದು ಗಾಸಿಪ್ ಹುಟ್ಟಿಕೊಳ್ತಾನೇ ಇವೆ. ಇಬ್ಬರ ಮಧ್ಯೆ ಅಫೇರ್ ಇದೆ, ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ ಎಂಬ ಅನೇಕ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಪ್ರಭಾಸ್ ಮಾತ್ರ ಅಂಥದ್ದೇನೂ ಇಲ್ಲ, ನಾವಿಬ್ಬರೂ ಗುಡ್ ಫ್ರೆಂಡ್ಸ್ ಎನ್ನುತ್ತಿದ್ದಾರೆ.

ಅದೇನೇ ಆದ್ರೂ ಪ್ರಭಾಸ್ ಹಾಗೂ ಅನುಷ್ಕಾ ಈಗಲೂ ಸಖತ್ ಕ್ಲೋಸಾಗಿದ್ದು, ಅನುಷ್ಕಾಗೆ ಪ್ರಭಾಸ್ ಬದುಕಿನಲ್ಲಿ ಮಹತ್ವದ ಸ್ಥಾನವಿದೆ ಅನ್ನೋದು ಪಕ್ಕಾ ಆಗಿದೆ.

ಇದಕ್ಕೆ ಸಾಕ್ಷಿ ಅಂದ್ರೆ ಅನುಷ್ಕಾ ಶೆಟ್ಟಿ, ಪ್ರಭಾಸ್‌ಗೆ ಕೊಟ್ಟಿರೋ ಬರ್ತಡೇ ಗಿಫ್ಟ್. ಮೊದಲಿನಿಂದಲೂ ಪ್ರಭಾಸ್‌ಗೆ ವಾಚ್‌ಗಳ ಬಗ್ಗೆ ಕ್ರೇಜ್‌ಜಾಸ್ತಿ. ಹಾಗಾಗಿ ಅವರಿಗೆ ಇಷ್ಟವಾಗುವಂತಹ ಸುಂದರ ಡಿಸೈನ್‌ನ ವಾಚ್ ಒಂದನ್ನು ಅನುಷ್ಕಾ ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದಾರೆ.

Comments are closed.