ಚೆನ್ನೈ; ತಮಿಳು ನಟ ವಿಜಯ್ ಅವರು ಅಭಿನಯಿಸಿರುವ ವಿವಾದಿತ ಚಿತ್ರ ಮೆರ್ಸಲ್’ಗೆ ಸೂಪರ್’ಸ್ಟಾರ್ ನಟ ರಜನಿಕಾಂತ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಮೆರ್ಸಲ್ ನಲ್ಲಿ ಗಂಭೀರ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಭಾನುವಾರ ಹೇಳಿದ್ದಾರೆ.
ಮೆರ್ಸಲ್ ಚಿತ್ರ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್ ಅವರು, ಯಾವುದೇ ವಿಚಾರಗಳನ್ನು ಹೆಸರಿಸದೆಯೇ ಪ್ರತಿಕ್ರಿಯೆ ನೀಡಿದ್ದಾರೆ. ಮೆರ್ಸಲ್ ನಲ್ಲಿ ಗಂಭೀರ ವಿಚಾರಗಳನ್ನು ಚರ್ಚಿಸಲಾಗಿದೆ ಎಂದಿರುವ ಅವರು ಚಿತ್ರದ ತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ಮೆರ್ಸಲ್ ಚಿತ್ರದಲ್ಲಿ ರಾಜಕೀಯದ ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಚಿತ್ರದ ವಿವಾದಾತ್ಮಕ ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಅಲ್ಲದೆ ಒಂದು ವೇಳೆ ಚಿತ್ರತಂಡ ಸಂಭಾಷಣೆಗೆ ಕತ್ತರಿ ಹಾಕದಿದ್ದರೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
Comments are closed.