ಮನೋರಂಜನೆ

‘ಹಂಬಲ್ ಪೊಲಿಟೀಷಿಯನ್ ನೋಗರಾಜ್’ ಚಿತ್ರದಲ್ಲಿ ಪುನೀತ್

Pinterest LinkedIn Tumblr


ಸ್ಯಾಂಡಲ್‍ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಚಿತ್ರ ‘ಹಂಬಲ್ ಪೊಲಿಟೀಷಿಯನ್ ನೋಗರಾಜ್’. ಸಾದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ದಾನಿಶ್ ಸೇಠ್ ಮುಖ್ಯಪಾತ್ರ ಪೋಷಿಸಿದ್ದಾರೆ. ಇದೀಗ ಈ ಚಿತ್ರಕ್ಕೆ ಹೊಸ ಪವರ್ ಬಂದಂತಾಗಿದೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರ ಪೋಷಿಸಿದ್ದು ಚಿತ್ರದಲ್ಲಿ ಪುನೀತ್ ಆಗಿಯೇ ಅವರು ಕಾಣಿಸಲಿದ್ದಾರೆ.

ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ನಡೆದ ಚಿತ್ರೀಕರಣದಲ್ಲಿ ಪುನೀತ್ ಭಾಗಿಯಾಗಿದ್ದರು. ಚಿತ್ರದ ಪಾತ್ರವರ್ಗದಲ್ಲಿ ಸುಮುಖಿ ಸುರೇಶ್, ವಿಜಯ್ ಚಂಡೂರ್, ಶ್ರುತಿ ಹರಿಹರನ್ ಹಾಗೂ ರೋಜರ್ ನಾರಾಯಣ್ ಇದ್ದಾರೆ.

ಈ ಚಿತ್ರಕ್ಕೆ ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಪಕರು. ಇನ್ನು ಈ ಚಿತ್ರದಲ್ಲಿ ಎಂಎಲ್ಎ ಆಗಬೇಕೆಂಬ ಕನಸು ಕಾಣುವ ಕಾರ್ಪೊರೇಟರ್ ಒಬ್ಬರ ಪಾತ್ರವನ್ನು ದಾನಿಶ್ ಪೋಷಿಸಿದ್ದಾರೆ. ಕಡೆಗೆ ಅವರು ಶಾಸಕರಾಗುತ್ತಾರಾ ಎಂಬುದೇ ಚಿತ್ರದ ಕಥಾಹಂದರ.

Comments are closed.