ಮನೋರಂಜನೆ

ಬಾಹುಬಲಿ ಪ್ರಭಾಸ್ ಹೊಸ ಚಿತ್ರ!

Pinterest LinkedIn Tumblr


ಬಾಹುಬಲಿ ಚಿತ್ರದ ಮೂಲಕ ಇಡೀ ದೇಶದ ಗಮನಸೆಳೆದ ನಟ ಪ್ರಭಾಸ್. ಇದೀಗ ನಾಲ್ಕು ವರ್ಷಗಳ ಬಳಿಕ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಮಿರ್ಚಿ ಚಿತ್ರವನ್ನು ನಿರ್ಮಿಸಿದ್ದ ಯೂವಿ ಕ್ರಿಯೇಷನ್ ಲಾಂಛನದಲ್ಲಿ ’ರನ್ ರಾಜಾ ರನ್’ ನಿರ್ದೇಶಕ ಸುಜಿತ್ ಈ ಭಾರಿ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದು ಪ್ರಭಾಸ್ ಅಭಿನಯದ 19ನೇ ಚಿತ್ರ. ಟಾಲಿವುಡ್‍ನ ಹಿರಿಯ ನಟ ಕೃಷ್ಣಂರಾಜು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ತೆಲುಗಿನ ಮತ್ತೊಬ್ಬ ಖ್ಯಾತ ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಆನ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

ಅಂದಹಾಗೆ ಇದು ತ್ರಿಭಾಷಾ ಚಿತ್ರ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಸುಮಾರು ರೂ.150 ಕೋಟಿ ಬಜೆಟ್ ಸಿನಿಮಾ ಎನ್ನುತ್ತವೆ ಮೂಲಗಳು. ಈ ಚಿತ್ರಕ್ಕೆ ನಾಯಕಿ ಇನ್ನೂ ಅಂತಿಮವಾಗಿಲ್ಲ.

Comments are closed.