ಮನೋರಂಜನೆ

ನಟಿ ರೋಜಾ ಪೊಲೀಸರ ವಶಕ್ಕೆ

Pinterest LinkedIn Tumblr


ಶಾಂತಿ ಭದ್ರತೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ವೈಕಾಪಾ ಎಂಎಲ್ಎ ರೋಜಾ ಅವರನ್ನು ಗನ್ನವರಂ ವಿಮಾನಾಶ್ರಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯವಾಡದಲ್ಲಿ ನಡೆಯುತ್ತಿರುವ ಮಹಿಳಾ ಪಾರ್ಲಮೆಂಟರಿ ಸಮಾವೇಶಕ್ಕೆ ಆಹ್ವಾನಿತರಾಗಿದ್ದ ರೋಜಾ ಶನಿವಾರ ಮುಂಜಾನೆ 9.30ಕ್ಕೆ ಹೈದರಾಬಾದ್‌ನಿಂದ ಟ್ರೂಜೆಟ್ ವಿಮಾನದಲ್ಲಿ ಗನ್ನವರಂ ತಲುಪಿದ್ದಾರೆ.

ವಿಮಾನದಿಂದ ಇಳಿದ ಕೂಡಲೆ ಅವರನ್ನು ವಿಜಯವಾಡ ಮಹಿಳಾ ಎಸಿಪಿ ಶ್ರಾವಣಿ, ಸಿಐ ಸಹೇರಾ ಬೇಗಂ ತಂಡ ವಶಕ್ಕೆ ಪಡೆದಿದ್ದಾರೆ. ಪಾರ್ಲಮೆಂಟರಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಭದ್ರತೆಗೆ ತೊಂದರೆಯಾಗಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಯೋಜನೆಯ ಪ್ರಕಾರ ಮಾಧ್ಯಮಗಳಿಗೂ ಕಾಣಿಸದಂತೆ ಹೊಸ ಟರ್ಮಿನಲ್ ಹಿಂಭಾಗದಿಂದ ರೋಜಾರನ್ನು ಗುಂಟೂರು ಜಿಲ್ಲೆ ಮೇಡಿಕೊಂಡೂರು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ.

Comments are closed.