ಮನೋರಂಜನೆ

ಸಿಂಗಂ 3 ಬಹಿರಂಗ ಮಾಡುತ್ತೀವಿ ಎಂದು ಬೆದರಿಕೆ

Pinterest LinkedIn Tumblr


ಬಹುಶಃ ಇದೇ ಮೊದಲ ಬಾರಿಗೆ ನಟನೊಬ್ಬರಿಗೆ ರಿಲೀಸ್ ಆಗಲಿರುವ ಸಿನಿಮಾವನ್ನೇ ಲೀಕ್ ಮಾಡುತ್ತೀವಿ ಎಂಬ ಬೆದರಿಕೆ ಬಂದಿದೆ. ನಟ ಸೂರ್ಯ ಅಭಿನಯದ ಸಿಗಂ 3 ಚಿತ್ರವನ್ನು ಲೀಕ್ ಮಾಡುವುದಾಗಿ ಪೈರಸಿ ವೆಬ್‍ಸೈಟ್‍ಗಳು ಪ್ರಕಟಿಸಿದ್ದಾವೆ. ಹರಿ ನಿರ್ದೇಶನದ ಈ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಸಿನಿಮಾ ಬಿಡುಗಡೆಯಾದ ದಿನವೇ ಲೀಕ್ ಮಾಡುತ್ತೇವೆ. ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡುತ್ತೀವೆಂದು ತಮಿಳು ರಾಕರ್ಸ್ ಎಂಬ ಪೈರಸಿ ಗ್ರೂಪ್ ಬೆದರಿಕೆ ಹಾಕಿದೆ. ಇತ್ತೀಚೆಗೆ ನಡೆದ ಯಮನ್ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಗಂ 3 ನಿರ್ಮಾಪಕ ಜ್ಞಾನವೇಲು ರಾಜಾ ಅಂತಾರ್ಜಾಲದಲ್ಲಿ ತಮಿಳು ರಾಕರ್ಸ್ ಪೈರಸಿ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ ಹರಿಹಾಯ್ದಿದ್ದರು.

ಸಿಗಂ 3 ಚಿತ್ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಬೆಳಗ್ಗೆ 11 ಗಂಟೆಗೆ ನೇರ ಪ್ರಸಾರದ ಮೂಲಕ ನಾವೂ ಬಿಡುಗಡೆ ಮಾಡುತ್ತೀವಿ ಎಂದು ಬೆದರಿಕೆ ಒಡ್ಡಲಾಗಿದೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೀವೋ ಇಲ್ಲವೋ ನಮಗೇ ಗೊತ್ತಿಲ್ಲ. ಆದರೆ ಅವರು ಮಾತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ. ನನ್ನ ಜತೆಗೆ ಚಿತ್ರೋದ್ಯಮ ಸಹ ಇದನ್ನು ನೋಡುತ್ತಾ ಸುಮ್ಮನೆ ಕುಳಿತಿದೆ. ಏನೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Comments are closed.