ಮನೋರಂಜನೆ

‘ಮೇಲುಕೋಟೆ ಮಂಜ’ ಚಿತ್ರದಲ್ಲಿ ಅಭಿನಯಿಸಲು ಬಿಡಿಗಾಸು ಹಣ ತೆಗೆದುಕೊಳ್ಳದ ಜಗ್ಗೇಶ್ ! ಏಕೆ ಎಂಬುದು ಮುಂದಿದೆ ಓದಿ…

Pinterest LinkedIn Tumblr

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ಮೇಲುಕೋಟೆ ಮಂಜ ಈ ವಾರ ತೆರೆಗೆ ಬರಲಿದೆ. ಬಹು ಪ್ರತಿಭೆಯುಳ್ಳ ಜಗ್ಗೇಶ್ ಅವರು ಈ ಸಿನಿಮಾ ನಿರ್ದೇಶಿಸಿ ನಟಿಸಿರುವುದು ಇದರ ಮತ್ತೊಂದು ವೈಶಿಷ್ಟ್ಯ.

ತನ್ನ ಬಹುದೊಡ್ಡ ಅಭಿಮಾನಿ ಚಿಪ್ಸ್ ಕೃಷ್ಣ ನಿರ್ಮಿಸಿರುವ ಮೇಲುಕೋಟೆ ಮಂಜ ಚಿತ್ರದಲ್ಲಿ ಅಭಿನಯಿಸಲು ಜಗ್ಗೇಶ್ ಬಿಡಿಗಾಸು ಹಣ ತೆಗೆದುಕೊಂಡಿಲ್ಲ, ಮೇಲುಕೋಟೆ ಮಂಜ ಸಿನಿಮಾ ಬಗ್ಗೆ ಜಗ್ಗೇಶ್ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.

ಹಲವು ವರ್ಷಗಳಿಂದ ಕೃಷ್ಣ ನನ್ನ ಅಭಿಮಾನಿ, ಅವರ ಬಗ್ಗೆ ನಾನು ಕೇಳಿದ್ದೆ, ಕೃಷ್ಣ ಅವರು ಮನೆಯಲ್ಲಿ ಚಿಪ್ಸ್ ಮಾಡಿ ಮಾರಾಟ ಮಾಡುತ್ತಾರೆ. ಕೃಷ್ಣ ಟೆಕ್ನಿಶಿಯನ್ ಅಗಿ ಸಿನಿಮಾ ಇಂಡಸ್ಟ್ರಿ ಸೇರಿದರು. ಯಾರೋ ಸುಳ್ಳು ಭರವಸೆ ನೀಡಿ ಅವರನ್ನು ಸಿನಿಮಾ ರಂಗಕ್ಕೆ ಕರೆತಂದಿದ್ದರು. ನಂತರ ಅವರ ಪರಿಚಯ ನನಗೆ ಆಯಿತು.

ಅವರ ಕನಸು ನನಸಾಗುವ ಕಾಲ ಬಂದಿತ್ತು. ಸಿನಿಮಾ ನಿರ್ಮಾಣಕ್ಕಾಗಿ ತಮ್ಮ ಬಳಿ ಇದ್ದ ಒಂದೇ ಒಂದು ಸ್ವಂತ ಮನೆಯನ್ನು ಅರ್ಧಕೋಟಿಗೆ ಮಾರಿದರು. ಆದರೆ ಆ ವೇಳೆ ಆತ ನನ್ನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆತ ನಾಪತ್ತೆಯಾಗಿದ್ದರು, ಆ ಪ್ರಕರಣ ಇನ್ನೂ ಫಿಲ್ಮ್ ಚೇಂಬರ್ ಮೆಟ್ಟಿಲೇರಿತು. ಮಳ್ಳೂರು ಶ್ರೀನಿವಾಸ್ ಎಂಬ ಡ್ಯಾನ್ಸರ್ ನನಗೆ ಕೃಷ್ಣ ಅವರ ಈ ಕಥೆಯನ್ನೆಲ್ಲಾ ನನ್ನ ಬಳಿ ಹೇಳಿದರು.

ಹಾಗಾಗಿ ನಾನು ಆತನಿಗೆ ಸಹಾಯ ಮಾಡಲು ನಿರ್ಧರಿಸಿದೆ. ನಾನು ಸಂಭಾವನೆ ತೆಗೆದುಕೊಳ್ಳದೇ ಆತನ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಇದೇ ವೇಳೆ ರಾಕ್ ಲೈನ್ ವೆಂಕಟೇಶ್ ಕೂಡ ಸಹಾಯ ಮಾಡಿದರು ಎಂದು ಜಗ್ಗೇಶ್ ತಿಳಿಸಿದ್ದಾರೆ.

ಶೂಟಿಂಗ್ ವೇಳೆ ಕಾಲಿಗೆ ಗಾಯವಾಗಿ ಕಳೆದ 10 ತಿಂಗಳಿಂದ ನಾನು ಕನ್ನಡ ಸಿನಿಮಾ ರಂಗದಿಂದ ದೂರ ಉಳಿದಿದ್ದೆ. ನಂತರ ನಾವು ಮೇಲುಕೋಟೆ ಮಂಜ ಬಿಡುಗಡೆಗೆ ಸಿದ್ಧಗೊಂಡಾಗ ನೀರ್ ದೋಸೆ ಸಿನಿಮಾ ಕೂಡ ಬಿಡುಗಡೆ ಸಿದ್ದವಾಗಿತ್ತು. ಮುಂದಿನ ವಾರ ಸಿನಿಮಾ ಬಿಡುಗಡೆಯಾಗುತ್ತಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ನಿರ್ಮಾಪಕನ ಹೋರಾಟ ಹಾಗೂ ಕಷ್ಟವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಿನಿಮಾ ಕಥೆ ನಿರ್ದೇಶಿಸಲಾಗಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ. ರಂಗಾಯಣ ರಘು ಮತ್ತು ಐಂದ್ರಿತಾ ರೈ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Comments are closed.