ಮನೋರಂಜನೆ

ವಿಸಾರಣೈ ಕನ್ನಡ ರಿಮೇಕ್ ನಲ್ಲಿ ಪುನೀತ್ 

Pinterest LinkedIn Tumblr


ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಮೊತ್ತ ಮೊದಲಿಗೆ ಅಭಿನಯಿಸಿದ ಅಪ್ಪು ಚಿತ್ರಕ್ಕೆ ಪ್ರಸಿದ್ಧ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಅದಾದ ನಂತರ ಪುನೀತ್ ಪ್ರಸಿದ್ಧ ನಿರ್ದೇಶಕರುಗಳ ಜೊತೆಯಲ್ಲಿ ಕೆಲಸ ಮಾಡಿದ್ದಾರೆ.
ಕೇವಲ ಕನ್ನಡ ನಿರ್ದೇಶಕರುಗಳಲ್ಲದೇ ಬೇರೆ ಭಾಷೆಯ ಹೆಸರಾಂತ ಡೈರೆಕ್ಟರ್ ಗಳ ಜೊತೆ ಪುನೀತ್ ಕೆಲಸ ಮಾಡಿದ್ದಾರೆ. ಅಪ್ಪು ಚಿತ್ರದಲ್ಲಿ ಪುರಿ ಜಗನ್ನಾಥ್, ಚಕ್ರವ್ಯೂಹ ಚಿತ್ರಕ್ಕೆ ಸರ್ವಣ್ಣನ್ ನಿರ್ದೇಶನ ಮಾಡಿದ್ದಾರೆ. ಗೌತಮ್ ಮೆನನ್ ಅಪ್ಪುವಿಗಾಗಿ ಸ್ಕ್ರಿಪ್ಟ್ ತಯಾರಿಸುತ್ತಿದ್ದಾರೆ. ಆದರೆ ಹೊಸ ವಿಷಯ ಏನೆಂದರೇ ತಮಿಳಿನ ವಿಸಾರಣೈ ಸಿನಿಮಾ ನಿರ್ದೇಶಕ ವೆಟ್ರಿಮಾರನ್ ಅವರ ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು ವಿಸಾರಣೈ ಚಿತ್ರದ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ವಿಸಾರಣೈ ರಿಮೇಕ್ ಚಿತ್ರವನ್ನು ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಹರ್ಷ ಜೊತೆ ಅಂಜನಿಪುತ್ರ ಪ್ರಾಜೆಕ್ಟ್ ಮುಗಿದ ನಂತರ ಪುನೀತ್ ವೆಟ್ರಿಮಾರನ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಥೆ ಮತ್ತು ಡೇಟ್ಸ್ ಅಂತಿಮವಾದ ನಂತರ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಕಳೆದ ವಾರ ವೆಟ್ರಿಮಾರನ್ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಗಮಿಸಿದ್ದ ವೇಳೆ ವಿಸಾರಣೈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಕಥೆ ಕೇಳಿ ಒಪ್ಪಿಕೊಂಡ ನಂತರ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, 2017ರ ಮಧ್ಯಭಾಗದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

Comments are closed.