ಕೆಲವು ತಿಂಗಳ ಹಿಂದೆ ಯುಟ್ಯೂಬ್’ನಲ್ಲಿ ಸ್ಟಾರ್ ಆಗಿ ಮಿಂಚಿದವರು ಹುಚ್ಚ ವೆಂಕಟ್. ತನ್ನದೇ ಮಾತುಗಳಿಂದ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದರು. ಅನಂತರ ಬಿಗ್ ಬಾಸ್’ನ 2 ಸೀಸನ್’ಗಳಲ್ಲೂ ಸ್ಪರ್ಧಿಗಳಾದ ರವಿ ಮರೂರು ಹಾಗೂ ಪ್ರಥಮ್ ಅವರ ಮೇಲೂ ಕೈ ಮಾಡಿ ಮತ್ತಷ್ಟು ಖ್ಯಾತರಾಗಿದ್ದರು. ಈಗ ಇವರ ಹವಾ ತುಸು ಕಡಿಮೆಯಾಗಿದೆ.
ನಂತರದ ದಿನಗಳಲ್ಲಿ ಫಸ್ಟ್ ರಾಂಕ್ ರಾಜು ಚಿತ್ರದ ಖ್ಯಾತಿಯ ನಟ ಗುರುನಂದನ್ ತನ್ನ ನಟನೆಯ ‘ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೈಲರ್’ನಿಂದ, ಕಿಚ್ಚ ಸುದೀಪ್ ಹೆಬ್ಬುಲಿ ಟ್ರೈಲರ್’ ಮೂಲಕ, ಪವರ್ ಸ್ಟಾರ್ ಪುನಿತ್ ರಾಜಕುಮಾರ ಚಿತ್ರದ ಸೆಕೆಂಡ್ ಟೀಸರ್ ಮೂಲಕ ಕ್ರೇಜ್ ಹಬ್ಬಿಸಿದ್ದರು. ದರ್ಶನ್ ಅಭಿನಯದ ಚಕ್ರವರ್ತಿ ಟೈಟಲ್ ಹಾಡು ಕೂಡ ಯೂ ಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿತ್ತು. ಬಿಡುಗಡೆಯಾದ 24 ಗಂಟೆಯಲ್ಲಿ 3 ಲಕ್ಷ ಜನ ವೀಕ್ಷಿಸಿದ್ದರು. ಈಗ ನಂ 1 ಸ್ಥಾನದಲ್ಲಿರುವುದು ಮಾಸ್ತಿಗುಡಿ ಟ್ರೈಲರ್. ಅನಿಲ್ ಹಾಗೂ ಉದಯ್ ಸಾವಿನಿಂದಾಗಿ ಬಹುನಿರೀಕ್ಷೆ ಹುಟ್ಟುಹಾಕಿದ ಈ ಚಿತ್ರದ ಟ್ರೈಲರ್’ಅನ್ನು ಇಲ್ಲಿಯವರೆಗೂ ಯುಟ್ಯೂಬ್’ನಲ್ಲಿ 12 ಲಕ್ಷಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಮನೋರಂಜನೆ
Comments are closed.