ಮನೋರಂಜನೆ

ನಟಿ ಪರೋಲ್‌ ಯಾದವ್‌ ಮೇಲೆ ಬೀದಿ ನಾಯಿ ದಾಳಿ: ಇಂದು ಶಸ್ತ್ರಚಿಕಿತ್ಸೆ

Pinterest LinkedIn Tumblr


ಮುಂಬೈ: ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ ನಟಿ ಪರೋಲ್‌ ಯಾದವ್‌ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.

ಆರಕ್ಕೂ ಹೆಚ್ಚು ನಾಯಿಗಳು ನಡೆಸಿರುವ ದಾಳಿಯಲ್ಲಿ ಕೈ, ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಕಡಿತದಿಂದ ಗಾಯಗೊಂಡಿರುವ ನಟಿ ಪರೋಲ್‌ ಮುಂಬೈನ ಕೋಕಿಲಾ ಬೆಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೋಗೇಶ್ವರಿ ಅಪಾರ್ಟ್‌ಮೆಂಟ್‌ ಬಳಿ ಸೋಮವಾರ ವಿಹಾರ ಮಾಡುತ್ತಿದ್ದಾಗ ಘಟನೆ ನಡೆದಿದೆ. ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.